ಬೀದರ್ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಿಂದ ಎಸ್‌ಪಿ ಕಚೇರಿಯವರೆಗೆ ಹಾಳಾದ ವಿದ್ಯುತ್ ದೀಪ, ರಸ್ತೆ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ರಿಸೈನ್ ಸಂಸ್ಥೆಯ ಸಂಸ್ಥಾಪಕ ರೋಹನ್ ಕುಮಾರ್ ಮನವಿ ಮಾಡಿದ್ದಾರೆ.
ʼಮಾರ್ಕೆಟ್ ಪೊಲೀಸ್ ಠಾಣೆಯಿಂದ ಎಸ್‌ಪಿ ಕಚೇರಿಯವರೆಗೆ ರಸ್ತೆಯ ಎರಡು ಬದಿಯಲ್ಲಿ ಯುಜಿಡಿ ಕಾಮಗಾರಿ ನಡೆಸಲಾಗಿದ್ದು, ಸದರಿ ರಸ್ತೆ ಪೂರ್ತಿ ಹಾಳಾಗಿದೆ. 32 ಅಡಿ ಅಗಲದ ರಸ್ತೆ ಯುಜಿಡಿ ಕಾಮಗಾರಿ ನಡೆಸಲು ತೋಡಿದ ಕಾರಣ 12 ಅಡಿ ರಸ್ತೆ ಉಪಯೋಗಕ್ಕೆ ಬರ್ತಿಲ್ಲ. ಉಳಿದ 20 ಅಡಿ ಅಗಲ ರಸ್ತೆಯಲ್ಲಿಯೇ ಓಡಾಡುವ ವಾಹನಗಳಿಂದ ಸಂಚಾರಕ್ಕೆ ದಟ್ಟಣೆ ಆಗುತ್ತಿದೆ. ಇದರಿಂದ ಪಾದಚಾರಿಗಳಿಗೂ ತೊದರೆಯಾಗುತ್ತಿದೆʼ ಎಂದು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | 5ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಇದೇ ರಸ್ತೆಯಲ್ಲಿ ಬೀದಿ ವಿದ್ಯುತ್ ದೀಪಗಳು ಹಾಳಾಗಿದ್ದು ಸಾರ್ವಜನಿಕರು ರಾತ್ರಿಯ ಸಮಯದಲ್ಲಿಓಡಾಡಲು ತೊಂದರೆ ಅನುಭವಿಸುತ್ತಿದ್ದರೆ. ಹೀಗಾಗಿ ಬೀದಿ ದೀಪ ದುರಸ್ತಿ, ರಸ್ತೆಯ ಎರಡೂ ಬದಿಯಲ್ಲಿ ಜೋತು ಬಿದ್ದಿರುವ ಮರಗಳ ಕೊಂಬೆ ತೆರವುಗೊಳಿಸಬೇಕು. ಮಂಗಲಪೇಟ್ ಬಸ್ ನಿಲ್ದಾಣದ ಪಕ್ಕದಲ್ಲಿ ಒಂದು ಹೈಮಾಸ್ ವಿದ್ಯುತ್ ದೀಪ ಅಳವಡಿಸಬೇಕೆಂದು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದಾರೆ.