ಚಾಮರಾಜನಗರ ಜಿಲ್ಲೆ,ಗುಂಡ್ಲುಪೇಟೆ ತಾಲ್ಲೂಕು ಚಿಕ್ಕಾಟಿ ಗ್ರಾಮದ ದಲಿತ ಸಮುದಾಯದ ರೈತರ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಲು ಸರ್ವೆ ಮಾಡಿರುವ ತಹಶೀಲ್ದಾರ್ ನಡೆ ಖಂಡಿಸಿ ತಾಲೂಕು ದಲಿತ ಸಂಘರ್ಷ ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರು
ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಮುಂಭಾಗ ಜಮಾಯಿಸಿದ ದಸಂಸ ಪ್ರತಿಭಟನಾಕಾರರು ತಹಸೀಲ್ದಾರ್ ಮತ್ತು ಸರ್ವೆ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಉದ್ದೇಶ ಪೂರ್ವಕವಾಗಿ ದಲಿತ ಸಮುದಾಯದ ರೈತರ ಜಮೀನಿನ ಮೇಲೆ ರಸ್ತೆ ಮಾಡ ಹೊರಟಿರುವುದು ಖಂಡನಿಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಾಟಿ ಗ್ರಾಮದ ರೈತ ಚಿಕ್ಕಮಾದಯ್ಯ ಮತ್ತು ಮಹದೇವಮ್ಮ ಎಂಬುವರ ಸರ್ವೆ ನಂಬರ್ 271/ 3 ರಲ್ಲಿ 0.28. ಗುಂಟೆ ಜಮೀನಿದ್ದು ಇದನ್ನೇ ನಂಬಿಕೂಡು ಎರಡು ಕುಟುಂಬಗಳು ಜೀವನ ನಡೆಸುತ್ತಿವೆ. ಅದೇ ಗ್ರಾಮದ ಚಿಕ್ಕೆಗೌಡ ಎಂಬುವರು ಜಮೀನಿಗೆ ಹೋಗಲು ದಾರಿ ಇಲ್ಲವೆಂದ ತಹಸೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ. ಚಿಕ್ಕೆಗೌಡ ಅವರ ಜಮಿನಿಗೆ ಹೋಗಲು ಬೇರೆ ದಾರಿ ಇದ್ದರೂ ಸಹ ದಲಿತ ರೈತರ ಜಮೀನಿನ ಮೇಲೆ ದಾರಿ ಮಾಡಲು ಸಂಬಂಧಪಟ್ಟ ಇಲಾಖೆಗೆ ನೋಟಿಸ್ ನೀಡಿ ಮಾರ್ಚ್ 18 ರಂದು ಏಕಾಏಕಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಬಂದ ತಹಶೀಲ್ದಾರ್,ನಕ್ಷೆಯಲ್ಲಿ ಚಿಕ್ಕೆಗೌಡರ ಜಮೀನಿಗೆ ಹೋಗಲು ದಾರಿ ಇಲ್ಲದಿದ್ದುರೂ ಸಹ ಬಲವಂತವಾಗಿ ದಲಿತ ರೈತರ ಮೇಲೆ ದಬ್ಬಾಳಿಕೆ ನಡೆಸಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.
ದಲಿತ ರೈತ ಕುಟುಂಬದ ಜಮೀನಿನ ಮೇಲೆ ದಾರಿ ಬಿಡಿಸುವ ಏಕಾಪಕ್ಷೀಯ ತೀರ್ಮಾನ ತೆಗೆದುಕೊಂಡಿರುವ ತಹಶೀಲ್ದಾರ್ ಅವರನ್ನು ಕೂಡಲೇ ಅಮಾನತುಪಡಿಸಿ ಎಸ್ಸಿ ಎಸ್ಟಿ ದೌರ್ಜನ್ಯದಡಿ ಪ್ರಕರಣವನ್ನು ದಾಖಲಿಸಿ ನೊಂದ ಕುಟುಂಬಕ್ಕೆ ನ್ಯಾಯ ದೂರಕಿಸಿ ಕೂಡಬೇಕೆಂದು ದಸಂಸ ಒತ್ತಾಯಿಸಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು | ‘ ಲೈನ್ ಮನೆ ‘ ಜೀತ ಇಂದಿಗೂ ಜೀವಂತ
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ, ಜಿಲ್ಲಾ ಸಂಘಟನಾ ಸಂಚಾಲಕ ನಂಜುಂಡ ಸ್ವಾಮಿ, ತಾಲೂಕು ಸಂಚಾಲಕ ಮಾಡ್ರಹಳ್ಳಿ ರಂಗಸ್ವಾಮಿ,ಹಿರಿಯ ರೈತ ಹೋರಾಟಗಾರ ಬೊಕ್ಕನಹಳ್ಳಿ ನಂಜುಂಡಸ್ವಾಮಿ, ನಾಗೇಂದ್ರ ಬಸವಟ್ಟಿಗೆ
ರಾಜ್ಯಾಧ್ಯಕ್ಷರು ಕರ್ನಾಟಕ ಅಂಬೇಡ್ಕರ್ ಸೇನೆ,ಪುಟ್ಟು ಚನ್ನವಡೆಯಪುರ,ಕುಮಾರ್ ಪಂಜನಹಳ್ಳಿ, ಪಿ ರಾಜು ಕುಂದಕೆರೆ, ಮರಿಯಯ್ಯ, ಪುತ್ತನಪುರ, ಚಿಕ್ಕೂಸಯ್ಯ ಹಂಗಳ, ಶಿವನಂಜ ಅಂಕಹಳ್ಳಿ, ಸಂಜು ನಂಜನಗೂಡು, ಮಾದಯ್ಯ ಇಂಗಲವಾಡಿ, ಮುಳ್ಳೂರು ಸ್ವಾಮಿ ತಾ ಅದ್ಯಕ್ಷ ಅಂಬೇಡ್ಕರ್ ಸೇನೆ, ಪ್ರಸಾದ್ ಕೂಡಸೋಗೆ, ನಾರಾಯಣ ಸ್ವಾಮಿ ವಡ್ಡಗೆರೆ, ಶಿವಣ್ಣ ಕೀಲಗೆರೆ, ಮಂಜುನಾಥ್ ಬರಗಿಕಾಲೋನಿ, ಮಹದೇವಸ್ವಾಮಿ ಚಿಕ್ಕಾಟಿ, ಕುಮಾರ್ ಅಂಕಹಳ್ಳಿ ಸೇರಿದಂತೆ ಇನ್ನಿತರರು ಇದ್ದರು.