- ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಬೇಕು
- ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಸಂಘದಿಂದ ವೈದಾಧಿಕಾರಿಗಳಿಗೆ ಮನವಿ.
ಹುಮನಾಬಾದ್ ತಾಲೂಕು ಆಸ್ಪತ್ರೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯ ಸೇರಿದಂತೆ ಕಚೇರಿಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಾಲೂಕು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಸಂಘ ಆಗ್ರಹಿಸಿದೆ.
ಈ ಸಂಬಂಧ ಹುಮನಾಬಾದ್ ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದ ಕಾರ್ಯಕರ್ತರು, ಕಚೇರಿಯ ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ ಐಡಿ ಕಾರ್ಡ್ ಧರಿಸಬೇಕು. ಸಾರ್ವಜನಿಕ ಸೇವೆಗಳ ಸಕಾಲ ಫಲಕವನ್ನು ಅಳವಡಿಸಬೇಕು. ಕಚೇರಿಯಲ್ಲಿ ಆಸನಗಳ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆರ್.ಟಿ.ಇ. ಕಾರ್ಯಕರ್ತರ ಸಂಘದ ತಾಲೂಕಾಧ್ಯಕ್ಷ ವಿಜಯಕುಮಾರ ಜಂಜೀರ್ ಉಪಾಧ್ಯಕ್ಷ ಅರವಿಂದ ಮಾಶೆಟ್ಟಿ ಸೇರಿದಂತೆ ಕಾರ್ಯಕರ್ತರಾದ ಮಾಣಿಕ ಹಡಪದ, ಸತೀಷ ಗಡವಂತಿ, ಬಾಬುರಡ್ಡಿ ಕಮ್ಮಾ, ವಿಜಯಕುಮಾರ ಚೆಟ್ಟಿ, ಅಮರನಾಥ ಹಡಪದ, ಸೈಯಾದ್ ಯಾಸಿನ್ ಅಲಿ , ಶಿವಕುಮಾರ ಮಿತ್ರಾ ಸೇರಿದಂತೆ ಇತರರಿದ್ದರು.
ಬೇಡಿಕೆಗಳು:
1 ಸಾರ್ವಜನಿಕ ಆಸ್ಪತ್ರೆ ಕಚೇರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು.
2.ನಿಗದಿಪಡಿಸಿದ ಸಮಯಕ್ಕಿಂತಲೂ ಹೆಚ್ಚಿನ ಕೆಲಸ ಸಿಬ್ಬಂದಿ ಮಾಡುತ್ತಿದ್ದರೆ ಅವರ ಹಿರಿಯ ಅಧಿಕಾರಿಗಳ ಅನುಮತಿ ಪತ್ರ ಕಡ್ಡಾಯ ನೀಡಿರಬೇಕು.
3. ರೋಗಿಗಳ ತಪಾಸಣೆಗೆ ಟೋಕನ್ ವ್ಯವಸ್ಥೆ ಮಾಡಬೇಕು.
4. ಸಾರ್ವಜನಿಕ ಆಸ್ಪತ್ರೆಯ ಎಲ್ಲ ಸೌಲಭ್ಯಗಳ ದರಪಟ್ಟಿಯ ಫಲಕವನ್ನು ಕನ್ನಡದಲ್ಲಿ ಅಳವಡಿಸಬೇಕು.
5. ಮಹಿಳಾ ಹಾಗೂ ಪುರಷರಿಗೆ ಪ್ರತ್ಯೇಕ ಚುಚ್ಚುಮದ್ದು ಕೋಣೆಗಳು ಮಾಡಬೇಕು.
6. ಸಾರ್ವಜನಿಕ ಆಸ್ಪತ್ರೆಯ ಲ್ಯಾಬ್ ನಲ್ಲಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಹಾಗೂ ಅವುಗಳ ದರಪಟ್ಟಿ ಕನ್ನಡದಲ್ಲಿ ಫಲಕವನ್ನು ಅಳವಡಿಸಿ 24 ಗಂಟೆ ಸೇವೆಯನ್ನು ಒದಗಿಸಬೇಕು.
7. ಆಸ್ಪತ್ರೆಯ ಎದುರುಗಡೆ ಖಾಸಗಿ ವಾಹನಗಳ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು.
8. ತಾಯಿ ಮತ್ತು ಮಗುವಿನ ಆಸ್ಪತ್ರೆಯ ವಿವರವನ್ನು ಸಾರ್ವಜನಿಕರಿಗೆ ಸಂಪೂರ್ಣವಾಗಿ ಮಾಹಿತಿ ಒದಗಿಸಬೇಕು.