ನೇರ ನಡೆ ನುಡಿಯ ಮೂಲಕ ಪತ್ರಿಕಾ ರಂಗದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಪತ್ರಕರ್ತ ಉಮೇಶ್ ಮೊಗವೀರ ಇಂದು ನಿಧನರಾಗಿದ್ದಾರೆ. ಅವರು ಟೈಮ್ಸ್ ಆಫ್ ಕರ್ನಾಟಕ ಸಾಗರ ತಾಲೂಕು ಪತ್ರಕರ್ತರಾಗಿದ್ದರು. ಅಲ್ಲದೆ ಸುದ್ದಿ ಸಾಗರ ಸಂಪಾದಕರಾಗಿದ್ದರು. ಕಳೆದ ಹಲವು ತಿಂಗಳುಗಳಿಂದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಮೇಶ್ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾಗರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅನೇಕ ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ಸಿಂಹ ಸ್ವಪ್ನವಾಗಿದ್ದ ಉಮೇಶ್ ಮೊಗವೀರ ಅವರ ನಿಧನದಿಂದ ಮಾಧ್ಯಮ ಬಳಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

ಸಾಗರ ಶಾಸಕ ಗೋಪಾಲ್ ಕೃಷ್ಣ ಬೇಳೂರ ಸೇರಿದಂತೆ ಅನೇಕ ಗಣ್ಯರು ಉಮೇಶ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಇರಲಿ ಎಂದು ಈದಿನ ಡಾಟ್ ಕಾಮ್ ಸಂಸ್ಥೆ ಪ್ರಾರ್ಥಿಸುತ್ತದೆ.