ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದಲ್ಲಿ ಆಟೋ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಉಂಟಾಗಿದ್ದು, ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿ, ಇನ್ನೊಬ್ಬರು ಮಾರ್ಗ ಮಧ್ಯದಲ್ಲಿ ಮೃತಪಟ್ಟ ಘಟನೆ ನಡೆದಿದೆ.ಘಟನೆಯಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ತ್ಯಾಗರ್ತಿ ರಸ್ತೆಯ ರೈಲ್ವೆ ಗೇಟ್ ಬೊಮ್ಮತ್ತಿ ಹತ್ತಿರ ಆಟೋ ಮತ್ತು ಕಾರ್ ನಡುವೆ ಈ ಭೀಕರ ಅಪಘಾತ ನಡೆದಿದೆ.
ಆಟೋ ಚಾಲಕ ರಾಘವೇಂದ್ರ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಮಾಲತಿ (35) ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಮೃತಪಟ್ಟವರು ಕಾರೆಹೊಂಡದ ನಿವಾಸಿಗಳು ಎಂದು ತಿಳಿದು ಬಂದಿದೆ.
ಇದನ್ನು ಓದಿದ್ದೀರಾ? ಗೌಡರ ಕುಟುಂಬದ ಕತೆ | ಮೂರು ತಲೆಮಾರುಗಳ ವಿಶ್ವಾಸಾರ್ಹ ಸಂಗಾತಿ- ಕಣ್ಣೀರು!
ಕಾರೆಹೊಂಡದ ಒಂದೇ ಕುಟುಂಬದ ಕೃತಿಕಾ (12), ರಾಮಪ್ಪ (40), ಸಾತ್ವಿಕ ( 8) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ವರದಿ: ಅಮಿತ್.ಆರ್, ಆನಂದಪುರ
