ಜಮಾಅತೆ ಇಸ್ಲಾಮಿ ಹಿಂದ್ ಸಾಗರ ಕುರ್‌ಆನ್ ಪ್ರವಚನದ ಸ್ವಾಗತ ಸಮಿತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಪ್ರತಿದಿನ ಸಂಜೆ 7ರಿಂದ 9ರವರೆಗೆ ಸಾರ್ವಜನಿಕವಾಗಿ ಕುರ್‌ಆನ್ ಪ್ರವಚನ ಕಾರ್ಯಕ್ರಮವಿರುತ್ತದೆ. ಅದರಂತೆ ಜನವರಿ 18ರ ಶನಿವಾರ ʼಮಾನವನ ಘನತೆʼ ಪ್ರವಚನವನ್ನು ಯಾದಗಿರಿ ಜಿಲ್ಲೆಯ ಕೊಡೆಕಲ್ಲಾ ದುರದುಂಡೇಶ್ವರ ವಿರಕ್ತ ಮಠದ ಶಿವಕುಮಾರ ಸ್ವಾಮೀಜಿ ನಡೆಸಿಕೊಡಲಿದ್ದಾರೆ.
ಬೆಂಗಳೂರಿನ ಶ್ರೀ ಕ್ಷೇತ್ರ ಕಾರ್ತಿಕೇಯ ಪೀಠದ ಯೋಗೇಂದ್ರ ಶ್ರೀಗಳು ಮತ್ತು ಜ ಲಾಲ್ ಹುಸೈನ್ ಕಂದಗಲ್ ಇಳಕಲ್ ಅವರು ಜನವರಿ 19ರ ಭನುವಾರ ಸಂಜೆ 7ರಿಂದ 9ರವರೆಗೆ ʼಜೀವನ ಉದ್ದೇಶʼದ ಕುರಿತು ಪವಿತ್ರ ಕುರ್‌ಆನ್ ಪ್ರವಚನ ನೀಡುವರು.

“ಪವಿತ್ರ ಕುರ್‌ಆನ್ ಶಿಷ್ಟಾಚಾರ ಮತ್ತು ನ್ಯಾಯದ ಪ್ರಣಾಳಿಕೆಯಾಗಿದೆ. ಸ್ವಾತಂತ್ರ್ಯದ ಘೋಷಣಾ ಪತ್ರವಾಗಿದೆ. ದೈನಂದಿನ ಜೀವನದಲ್ಲಿ ಸತ್ಯ-ನ್ಯಾಯಗಳ ಶಿಕ್ಷಣ ನೀಡುವ ಕಾನೂನಿನ ಮಹಾನ್ ಗ್ರಂಥವಾಗಿದೆ. ಇನ್ನಾವುದೇ ಧಾರ್ಮಿಕ ಗ್ರಂಥ ಜೀವನದಲ್ಲಿ ಎಲ್ಲ ಸಮಸ್ಯೆಗಳ ವ್ಯಾವಹಾರಿಕ ವ್ಯಾಖ್ಯಾನ ಮತ್ತು ಪರಿಹಾರ ನೀಡುವುದಿಲ್ಲ” ಎಂದು ಸರೋಜಿನಿ ನಾಯ್ಡು ಹೇಳಿದ್ದರು.
ಈ ಸುದ್ದಿ ಓದಿದ್ದೀರ? ಶಿವಮೊಗ್ಗ | ನೆರವಿನ ಹಸ್ತಕ್ಕಾಗಿ ಎದುರು ನೋಡುತ್ತಿದೆ ಬಡ ಕುಟುಂಬ

“ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಸ್ಪರ ಪರಿಚಯ ಪಟ್ಟುಕೊಳ್ಳಲಿಕ್ಕಾಗಿ ನಿಮ್ಮ ಜನಾಂಗಗಳನ್ನೂ ಗೋತ್ರಗಳನ್ನೂ ಮಾಡಿದೆವು. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಹೆಚ್ಚು ಗೌರವಕ್ಕೆ ಪಾತ್ರನು. ನಿಶ್ಚಯವಾಗಿಯೂ ಅಲ್ಲಾಹನು ಸರ್ವಜ್ಞನೂ ವಿವರಪೂರ್ಣನೂ ಆಗಿರುತ್ತಾನೆ” ಎಂಬುದು ಪವಿತ್ರ ಕುರ್‌ಆನ್‌ನಲ್ಲಿ ಅಡಕವಾಗಿದೆ.