ಸಾಗರ ಟೌನ್‌ನ ನಗರೇಶ್ವರ ದೇವಸ್ಥಾನದಲ್ಲಿ ದೇವಿಯ ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರ ಕದ್ದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಕುಮಾರ್ (39) ಬಂಧಿತ ಆರೋಪಿ.
ಫೆ.08 ರಂದು ಬೆಳಗ್ಗೆ ದೇವಸ್ಥಾನದಲ್ಲಿ ದೇವಿಯ ಕೊರಳಲ್ಲಿದ್ದ ಅಂದಾಜು 30 ಗ್ರಾಂ 570 ಮಿಗ್ರಾಂ ತೂಕದ ಮಾಂಗಲ್ಯ ಸರ ಕಳ್ಳತನವಾಗಿದೆ ಎಂದು ದೂರು ನೀಡಲಾಗಿತ್ತು. ದೂರಿನ ಮೇರೆಗೆ ಸಾಗರ ಐಪಿಸಿ ಕಾಯ್ದೆ 454, 457, 380 ರೀತ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೀದರ್ ಪ್ರವಾಸೋದ್ಯಮ ಅಭಿವೃದ್ಧಿಗೆ ₹25 ಕೋಟಿ ಅನುದಾನ ಮಂಜೂರು : ಸಂಸದ ಸಾಗರ್ ಖಂಡ್ರೆ
ತನಿಖೆ ನಡೆಸಿದ ಸಾಗರ ಪೊಲೀಸರು ಶಿರವಂತೆ ನಿವಾಸಿ ಶಿವಕುಮಾರ್‌ನನ್ನು ಬಂಧಿಸಿದ್ದಾರೆ. ಆರೋಪಿತನಿಂದ ಅಂದಾಜು ಮೌಲ್ಯ 200000/- ರೂಗಳ 30 ಗ್ರಾಂ 570 ಮಿಲಿ ತೂಕದ ಬಂಗಾರದ ಮಾಂಗಲ್ಯ ಸರವನ್ನು ವಶಕ್ಕೆ ಪಡೆದಿದ್ದಾರೆ.
