ಆ್ಯಂಬುಲೆನ್ಸ್ ಬಾಗಿಲು ತೆಗೆಯಲಾಗದೆ ವಿಳಂಬವಾಗಿದ್ದರಿಂದ ಚಿಕಿತ್ಸೆಗೆ ಬಂದಿದ್ದ ವ್ಯಕ್ತಿ ಸಾವನ್ನಪ್ಪರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ನಡೆದಿದೆ.
ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾದ ಗೇರ್ ಬೀಸ್ ನಿವಾಸಿ ಪ್ರಭಾಕರ ಎಂಬುವವರು ಸಾಗರ ತಾಲೂಕಿನ ಆನಂದಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲು ಸಿದ್ಧತೆಯಲ್ಲಿದ್ದಾಗ ತುರ್ತು ಸೇವೆಗೆ ಅಗತ್ಯವಿರುವ 108 ವಾಹನದ ಬಾಗಿಲು ತೆಗೆಯಲು ಬಾರದೆ ಗಂಟೆಗಟ್ಟಲೆ ಸಮಯ ವಿಳಂಬವಾಗಿದೆ.
ಬಾಗಿಲು ತೆಗೆಯಲು ಹರಸಾಹಸಪಟ್ಟು 108 ವಾಹನದ ಬಾಗಿಲು ತೆಗೆದು ಒಮ್ಮೆಲೇ ಬಾಗಿಲು ಹಾಕಿದ ಶಬ್ದಕ್ಕೆ ಚಿಕಿತ್ಸೆಗೆಂದು ಬಂದಿದ್ದ ಪ್ರಭಾಕರ ಎಂಬುವವರು ಮೃತಪಟ್ಟಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಎಸ್‌ಯುಸಿಐ ಆಗ್ರಹ
“ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವ ವಾಹನಗಳು ಸದಾ ಸಿದ್ಧತೆಯಲ್ಲಿರಬೇಕಾಗಿರುತ್ತದೆ. ಹೀಗಿರುವಾಗ ವಾಹನಗಳು ತೀರ ಹದಗೆಟ್ಟು ಹೋಗಿವೆ. ಕೂಡಲೇ ಇಂತಹ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಹೋರಾಟ ಮಾಡಲಾಗುವುದು” ಎಂದು ರೈತ ಸಂಘದ ಮುಖಂಡ ರಮೇಶ್ ಐಗಿನ್ ಬೈಲ್ ಎಚ್ಚರಿಕೆ ನೀಡಿದ್ದಾರೆ.
ವರದಿ: ಧರ್ಮರಾಜ್ ಪತ್ರಕರ್ತ, ಸಾಗರ