ಬ್ರಹ್ಮಾವರದಲ್ಲಿ ದನದ ರುಂಡದ ಹೆಸರಲ್ಲಿ ಕೊಮು ದ್ವೇಷ ಹರಡಿಸಲು ಮುಂದಾದ ಶಾಸಕ ನಿಗೆ ಭಾರೀ ಹಿನ್ನಡೆ ಉಂಟಾದ ಹಿನ್ನಲೆಯಲ್ಲಿ ವಿಚಲಿತರಾಗಿ ಮುಖ್ಯಮಂತ್ರಿಗಳು ಹಾಗೂ ನಮ್ಮ ನಾಯಕ ಪ್ರಸಾದ್ ರಾಜ್ ಕಾಂಚನ್ ವಿರುದ್ದ ಹೇಳಿಕೆಗಳನ್ನು ನೀಡುತ್ತಿರುವ ಶಾಸಕರು ಹಾಗೂ ಅವರ ಚೇಲಾಗಳು ಶ್ರೀ ಕೃಷ್ಣ ಮಠದಲ್ಲಿ ಅತ್ಮಶುದ್ದಿ ಮಾಡಿಕೊಳ್ಳಲಿ ಎಂದು ಉಡುಪಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸಜ್ಜನ್ ಶೆಟ್ಟಿ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಗನ್ನು ಟೀಕೆ ಮಾಡುವಷ್ಟರ ಮಟ್ಟಿಗೆ ತಾವಿನ್ನು ಬೆಳೆದಿಲ್ಲ. ರಾಜ್ಯದಲ್ಲಿ ನೂರಮೂವತ್ತು ಸೀಟ್ ಗೆಲ್ಲುವ ಮೂಲಕ ರಾಜ್ಯದಲ್ಲಿ ಮಾದರಿ ಆಡಳಿತ ನೀಡುವ ಯಶಸ್ವಿಯಾಗಿದ್ದಾರೆ. ಬಡವರ ದೀನ ದಲಿತರರಿಗೆ ಪಂಚ ಯೋಜನೆಗಳನ್ನು ನೀಡುವ ಮೂಲಕ ಶ್ರೀ ಕೃಷ್ಙ ನ ಕೃಪೆಗೆ ಮುಖ್ಯಮಂತ್ರಿಗಳು ಪಾತ್ರರಾಗಿದ್ದಾರೆ.
ಇನ್ನು ಬಿಜೆಪಿ ನಗರಧ್ಯಕ್ಷ ದಿನೇಶ್ ಅಮೀನ್ ರವರು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಬಗ್ಗೆ ಲಘುವಾಗಿ ಮಾತನಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ಬಿಜೆಪಿ ಪಕ್ಷದಲ್ಲಿ ಉಂಟಾಗಿರುವ ಲೋಪದೋಷಗಳನ್ನು ಮೊದಲು ಸರಿಪಡಿಸಿಕೊಳ್ಳಿ.ಅಧ್ಯಕ್ಷರನ್ನು ರಾತೋ ರಾತ್ರಿ ಬದಲಾಯಿಸಿದ ಪ್ರಕರಣದಲ್ಲಿ ಬಹಿರಂಗ ಸಭೆಯಲ್ಲಿ ನಿಮ್ಮ ಪಕ್ಷದ ಮುಖವಾಡ ವನ್ನು ನಿಮ್ಮದೇ ನಾಯಕ ಬಹಿರಂಗ ಪಡಿಸಿದ್ದು ಇಡೀ ಜಿಲ್ಲೆ ಕಂಡಿದೆ. ಮನೆ ಒಂದು ನೂರು ಬಾಗಿಲು ನಿಮ್ಮ ಪಕ್ಷದಾಗಿದ್ದು ಅದನ್ನು ಮೊದಲು ಸರಿಪಡಿಸಿಕೊಳ್ಳಿ
ಪ್ರಸಾದ್ ರಾಜ್ ಕಾಂಚನ್ ರವರ ಇಡೀ ಕುಟುಂಬವೇ ಕಾಂಗ್ತೆಸ್ ಪಕ್ಷಕ್ಕಾಗಿ ,ಜನರ ಸೇವೆಗಾಗಿ ದುಡಿದವರು. ಬಡವರ ಕಷ್ಟಕರ್ಪಣ್ಯಗಳಿಗೆ ನೆರವಾದವರು. ನಿಮ್ಮ ಶಾಸಕರ ಹಾಗೆ ಬಡವರ ಸಾಲದ ಹೆಸರಲ್ಲಿ ಬ್ಯಾಂಕಿನ ಹೆಸರಿನಲ್ಲಿ ಅನಾಚಾರ ವಂಚನೆ ಮಾಡಿಲ್ಲ.ಯಾವುದೇ ಕ್ರಿಮಿನಲ್ ಪ್ರಕರಣ ಗಳಲ್ಲಿ ಭಾಗಿಯಾದವರಲ್ಲ. ಓರ್ವ ಸಾಮಾನ್ಯ ಮನುಷ್ಯನಿಗೂ ನೋವುಂಟು ಮಾಡಿದವರಲ್ಲ. ನೂರಾರು ಕೇಸುಗಳನ್ನು ಇಟ್ಟುಕೊಂಡು ಜಿಲ್ಲೆಯಲ್ಲಿ ಶಾಲಾ ಮಕ್ಕಳಲ್ಲಿ ಕೋಮು ವಿಷ ಬೀಜ ಬಿತ್ತಿ, ಸಮಾಜದಲ್ಲಿ ಆಶಾಂತಿ ಸೃಷ್ಟಿ ಮಾಡುವ ಯಶ್ ಪಾಲ್ ಸುವರ್ಣರ ಪಾಪಗಳಿಗೆ ಯಾವ ಪುಣ್ಯ ಕ್ಷೇತ್ರಗಳಲ್ಲು ಪರಿಹಾರ ಸಿಗಲ್ಲ, ಈ ಸತ್ಯ ವನ್ನು ನಗರಾಧ್ಯಕ್ಷ ದಿನೇಶ್ ಅಮೀನ್ ಅರ್ಥಮಾಡಿಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಕೋಮು ಹಿಂಸೆ ನಿಗ್ರಹ ದಳವನ್ನು ರಚನೆ ಮಾಡುವುದರ ಮೂಲಕ, ವಿಷ ಬೀಜ ಬಿತ್ತುದ್ದಿದ್ದ ಶಾಸಕರು ಹಾಗೂ ಅವರ ಚೇಲಾಗಳು ವಿಚಲಿತರಾಗಿದ್ದಾರೆ. ಇನ್ನೂ ಎಲ್ಲಿ ತಾವು ಜನರ ಮುಂದೆ ಬೆತ್ತಲಾಗುತ್ತೇವೋ ಎನ್ನುವ ಅತಂಕದಲ್ಲಿ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ನಾಯಕರುಗಳ ಬಗ್ಗೆ ನಾಲಿಗೆ ಹರಿಯ ಬಿಡುತ್ತಿದ್ದಾರೆ.
ಗೋವಿನ ಹೆಸರಲ್ಲಿ ರಾಜಕೀಯ ಮಾಡುವ ಶ್ರೀ ಬ್ಯಾಂಕಿನ ಹೆಸರಲ್ಲಿ ಜನರಿಗೆ ಮಾಡಿದ ಮೋಸ ಮಾಡುವ ಶಾಸಕರು ಶ್ರೀ ಕೃಷ್ಣ ನ ಹೆಸರನ್ನು ಎತ್ತಲೂ ಯೋಗ್ಯರಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಂಡು, ರಾಜ್ಯದ ಮುಖ್ಯಮಂತ್ರಿಗಳ ಬಳಿ ಕ್ಷಮೆ ಕೇಳುವ ಬುದ್ದಿಶ್ರೀ ಕೃಷ್ಣಪರಮಾತ್ಮು ಅನುಗ್ರಹಿಸಲಿ ಎಂದು ಹೇಳಿದ್ದಾರೆ.