ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ ವ್ಯಸನಮುಕ್ತಕ್ಕೆ ಮುಂದಾಗಬೇಕು. ಮನೆಯಲ್ಲಿ ಶಿಕ್ಷಣವಂತ ಪೋಷಕರು ಇದ್ದಾಗ ಮಕ್ಕಳನ್ನು ಉತ್ತಮ ದಾರಿಯಲ್ಲಿ ನಡೆಸಲು ಅನುಕೂಲವಾಗುತ್ತದೆ. ಅಂತೆಯೇ ಸಮಾಜದಲ್ಲಿ ಉತ್ತಮ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ನಡೆದಾಗ ಇಂದಿನ ಮಕ್ಕಳು ಮುಂದೆ ಉತ್ತಮ ಪ್ರಜೆಗಳಾಗುತ್ತಾರೆ ಎಂದು ಮಹಾರಾಷ್ಟ್ರ ಡ್ರಗ್ಸ್ ವಿರೋಧಿ ಹೋರಾಟಗಾರ ಅವಿನಾಷ್ ಕಾಕಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆಯ ಸಕಲೇಶಪುರ ನಗರದಲ್ಲಿ ಹಮ್ಮಿಕೊಂಡಿದ್ದ ʼಡ್ರಗ್ಸ್ ಮುಕ್ತ ಸಕಲೇಶಪುರʼ ಎರಡನೇ ವರ್ಷದ ಆಂದೋಲನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
“ಈ ಊರಿನ ತುಂಬಾ ನಶಾಮುಕ್ತ ಕೇಂದ್ರಗಳಿರಬೇಕೆ? ಅಥವಾ ಯುವಕರು ನಶೆಯಲ್ಲಿ ಮುಳುಗುವಂತ ಸ್ಥಳಗಳಿರಬೇಕೆ? ಎಂದು ಸಭಿಕರಲ್ಲಿ ಪ್ರಶ್ನಿಸಿದ ಅವರು, ಮನುಷ್ಯನಿಗೆ ಎರಡು ಜರೂರುಗಳಿವೆ, ಬುದ್ದಿ ಪ್ರಣೀಕವಾದ ಅಗತ್ಯ, ಇನ್ನೊಂದು ದೈಹಿಕ ಪ್ರಣೀಕವಾದ ಅಗತ್ಯವಿರುತ್ತದೆ” ಎಂದು ತಿಳಿಸಿದರು.
“ಭೌತಿಕ ಜಗತ್ತಿಗೆ ಭೌತಿಕವಾದ ಅಗತ್ಯಗಳಿರುತ್ತವೆ. ಅವುಗಳನ್ನು ಕೂಡಲೇ ಪರಿಹರಿಸಲು ಸಾಧ್ಯವಿಲ್ಲ. ಬೌದ್ಧಿಕ ಅಗತ್ಯಗಳಾದ ರೊಟ್ಟಿ, ಶಿಕ್ಷಣ ಸೇರಿದಂತೆ ಹಲವು ಅಗತ್ಯತೆಗಳು ನಮಗೆ ಗೊತ್ತಿರುತ್ತವೆ, ಇವುಗಳನ್ನು ಹೊರತುಪಡಿಸಿ ಯೋಚನಾಶಕ್ತಿಗಳನ್ನು ಮಾಡುವಂತಹ ಭೌದ್ಧಿಕ ಶಕ್ತಿ ನಮ್ಮಲ್ಲಿರಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್ ಪಾಟೀಲ್
“ವ್ಯಸನಿಗಳಾಗಿರುವ ಪೋಷಕರು ಮನೆಯಲ್ಲಿದ್ದಾಗ, ವ್ಯಸನಿಗಳು ಸಮಾಜದಲ್ಲಿದ್ದಾಗ ಮಕ್ಕಳು ಉತ್ತಮ ಪ್ರಜೆಗಳಾಗಿ ಬದುಕಲು ಸಾಧ್ಯವಿಲ್ಲ. ನಶೆಯಲ್ಲಿ ತೊಡಗಿರುವವರ ನಡುವೆ ಮಕ್ಕಳು ಬೆಳೆದಾಗ ಅವರನ್ನೇ ಅನುಸರಿಸುವ ಮೂಲಕ ಮಕ್ಕಳು ನಶೆ ಏರಿಸುವಂತಹ ಡ್ರಗ್ಸ್‌ಗಳಿಗೆ ಬಲಿಯಾಗುವುದರ ಜತೆಗೆ ದೇಶಕ್ಕೆ ಮಾರಕವಾಗುತ್ತಾರೆ” ಎಂದು ಕಳವಳ ವ್ಯಕ್ತಪಡಿಸಿದರು.
ಅತಿಥಿಗಳು ಉಪವಿಭಾಗಾಧಿಕಾರಿ ಎಚ್ ಡಿ ರಾಜೇಶ್, ತಹಶೀಲ್ದಾರ್ ಸುಪ್ರೀತ, ಡಿವೈಎಸ್‌ಪಿ ಪ್ರಮೋದ್ ಕುಮಾರ್, ಕಾರ್ಯನಿರ್ವಹಣಾಧಿಕಾರಿ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ, ಧರ್ಮಸ್ಥಳ ನಶಾ ಮುಕ್ತ ಕೇಂದ್ರದ ಡಾ. ನವೀನ್ ಚಂದ್ರಶೇಕರ್ ಇದ್ದರು. ಪತ್ರಕರ್ತ ಮಲ್ನಾಡ್ ಮೆಹಬೂಬ್ ಸ್ವಾಗತಿಸಿದರು, ಜೈ ಭೀಮ್ ಮಂಜು ಕಾರ್ಯಕ್ರಮದ ನಿರೂಪಣೆ ಮಾಡಿದರು.
