ಕೆಲಸ, ವ್ಯಾಪಾರ ಇನ್ನಿತರೆ ಮೂಲಗಳಿಂದ ಹಣ ಸಂಪಾದನೆ ಮಾಡುವ ಜತೆಗೆ ಹಣದ ನಿರ್ವಹಣೆ ಮತ್ತು ಉಳಿತಾಯ ಕೂಡ ಜೀವನದಲ್ಲಿ ಬಹಳ ಮುಖ್ಯ ಎಂದು ಎನ್‌ಆರ್‌ಎಲ್‌ಎಂ ಯೋಜನಾ ನಿರ್ದೇಶಕ ಈಶ್ವರಪ್ಪ ಸಲಹೆ ನೀಡಿದರು.
ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳದಲ್ಲಿ ಶ್ರೀತುಳಸಿ ಸಂಜೀವಿನಿ ಸಕ್ಷಮ್ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ಹಾಗೂ ಒಕ್ಕೂಟದ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಡಿಜಿಟಲ್ ಅರೆಸ್ಟ್, ಡಿಜಿಟಲ್ ಕಳ್ಳತನಗಳು ಹೆಚ್ಚಾಗಿವೆ. ಬಹಳಷ್ಟು ಮಂದಿ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿ ಇಂದು ನಷ್ಟದಲ್ಲಿದ್ದಾರೆ. ಉಳಿತಾಯವಾಗಲಿ, ಸಾಲವೇ ಆಗಲಿ ಬ್ಯಾಂಕ್ ನೊಂದಿಗೆ ವ್ಯವಹಾರ ಮಾಡುವುದು ಎಲ್ಲ ದೃಷ್ಟಿಯಿಂದಲೂ ಸುರಕ್ಷಿತ ಎಂದು ಸಲಹೆ ನೀಡಿದರು.
ಇದನ್ನೂ ಓದಿ : ಶಿಡ್ಲಘಟ್ಟ | ಪರಿಸರ ಸಂರಕ್ಷಣೆ ಘೋಷಣೆಗೆ ಸೀಮಿತವಾಗದಿರಲಿ : ನ್ಯಾ.ಮೊಹಮ್ಮದ್ ರೋಷನ್ ಷಾ
ಶ್ರೀತುಳಸಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಬಿರಾದಾರ್, ಡಿ.ಎಂ.ಮುನಿರಾಜು, ಎಫ್‌ಎಲ್ ಸಿಆರ್‌ಪಿ ಅಮರಾವತಿ, ತಾಲೂಕು ಅಭಿಯಾನ ನಿರ್ವಹಣಾ ಘಟಕದ ಬಾಲರಾಜ್, ಕೆನರಾ ಬ್ಯಾಂಕ್ ತರಬೇತಿ ಕೇಂದ್ರದ ಮಧುಪ್ರಿಯ, ಕೃಷಿ, ಪಶು ಸಖಿಯರು, ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.