ತೋನ್ಸೆ-ಹೂಡೆಯ ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ಒಟ್ಟು 29 ವಿದ್ಯಾರ್ಥಿಗಳಲ್ಲಿ 28 ಮಂದಿ ಉತ್ತೀರ್ಣರಾಗಿ ಶೇ 97ರಷ್ಟು, ವಿಜ್ನಾನ ವಿಭಾಗದಲ್ಲಿ ಒಟ್ಟು 23 ವಿದ್ಯಾರ್ಥಿಗಳಲ್ಲಿ 22 ಮಂದಿ ಉತ್ತೀರ್ಣಗೊಂಡು ಶೇ 96 ರಷ್ಟು ಫಲಿತಾಂಶ ಪಡೆದುಕೊಂಡಿದೆ.
ಒಟ್ಟು ಕಾಲೇಜಿನ ಫಲಿತಾಂಶ 96.15% ರಷ್ಟು ಆಗಿದ್ದು, ಸನ್ಹ(576/600) 96% ರಷ್ಟು, ವಿಜ್ನಾನ ವಿಭಾಗದಲ್ಲಿ ಹಸೀಬ ರಹಮತುಲ್ಲಾಹ್(564/600) ಶೇ 94% ರಷ್ಟು ಅಂಕ ಪಡೆದು ಸಾಧನೆಗೈದಿದ್ದಾರೆ. ಒಟ್ಟು ವಿಶಿಷ್ಟ ಶ್ರೇಣಿ 16, ಪ್ರಥಮ ಶ್ರೇಣಿ 29, ದ್ವಿತೀಯ ಶ್ರೇಣಿ 5 ಪಡೆದು ಕೊಂಡಿರುತ್ತಾರೆ.