ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಂತಾರೆ, ಅತ ಬ್ರಿಟಿಷರಿಂದ ಪೆನ್ಶನ್ ತೆಗೆದುಕೊಂಡು ಕೆಲಸ ಮಾಡುತ್ತಿದ್ದ. ಸಾವರ್ಕರ್ ಅನ್‌ಮಾಸ್ಕಡ್ (ಮುಖವಾಡ ಕಳಚಿದ ಸಾವರ್ಕರ್) ಎಂಬ ಪುಸ್ತಕದಲ್ಲಿ ಆತ ಬಗ್ಗೆ ಎಲ್ಲ ಮಾಹಿತಿ ಇದೆ. ಬ್ರಿಟಿಷರಿಗೆ ಸಹಾಯ ಮಾಡುವ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರ ಆಗಲು ಹೇಗೆ ಸಾಧ್ಯ ‘ವಿ.ಡಿ ಸಾವರ್ಕರ್ – ಏಳು ಮಿಥ್ಯೆಗಳು’ ಪುಸ್ತಕದ ಅನುವಾದಕ ತಡಗಡಲೆ ಸುರೇಂದ್ರ ರಾವ್ ಹೇಳಿದರು.
ಬೆಂಗಳೂರಿನಲ್ಲಿ ಕ್ರಿಯಾ ಪ್ರಕಾಶನ ಆಯೋಜಿಸಿದ್ದ ‘ವಿ.ಡಿ ಸಾವರ್ಕರ್ – ಏಳು ಮಿಥ್ಯೆಗಳು’ ಪುಸ್ತಕ ಬಿಡುಗಡೆ ಮತ್ತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. “ಸಾವರ್ಕರ್‌ನನ್ನು ಇಂಗ್ಲೆಂಡ್‌ನಲ್ಲಿ ಬಂಧಿಸಲಾಗಿತ್ತು. ಕಾರಣವಿಷ್ಟೇ, ಆತನ ಅನುಯಾಯಿಯೊಬ್ಬ ಬ್ರಿಟಿಷ್ ಅಧಿಕಾರಿಯನ್ನ ಕೊಂದಿದ್ದ. ಬಳಿಕ, ಸಾವರ್ಕರ್‌ನನ್ನು ಬಂಧಿಸಿ, ಜೈಲಿನಲ್ಲಿಟ್ಟರು. ಇಷ್ಟೇ ಆತನ ಸ್ವಾತಂತ್ರ್ಯ ಹೋರಾಟ. ಜೈಲಿನದ್ದ ಆತ ಬ್ರಿಟಿಷರಿಗೆ ಕ್ಷಮೆಯಾಚಿಸಿ ಪತ್ರಗಳ ಮೇಲೆ ಪತ್ರ ಬರೆದ. ಆಗಲೇ ಈತನೆಂತ ಸ್ವಾತಂತ್ರ್ಯ ಹೋರಾಟನೆಂದು ಬ್ರಿಟಿಷರಿಗೆ ಗೊತ್ತಾಯಿತು” ಎಂದು ತಿಳಿಸಿದರು.
“ಆರಂಭದಲ್ಲಿ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಆಗಿದ್ದ. ಆತ ಒಂದು ಪುಸ್ತಕವನ್ನೂ ಬರೆದಿದ್ದ. ಪುಸ್ತಕದಲ್ಲಿ, ‘ಹಿಂದು-ಮುಸ್ಲಿಮರು ಒಂದೇ ತಾಯಿಯ ಮಕ್ಕಳಾಗಿದ್ದಾರೆ. ಅವರ ಹೆಸರುಗಳು ಬೇರೆ-ಬೇರೆ ರೀತಿ ಇರಬಹುದು. ಆದರೆ, ಅವರು ಸೋದರರಾಗಿದ್ದಾರೆ. ಆದ್ದರಿಂದ, ಎರಡೂ ಸಮುದಾಯಗಳ ಆಡಳಿತಗಾರರು ತಮ್ಮ ಹಗೆತನವನ್ನ ಬದಿಗಿಟ್ಟು, ಬ್ರಿಟಿಷರ ವಿರುದ್ಧ ಹೋರಾಟಕ್ಕಿದ್ದಿದ್ದಾರೆ’ ಎಂದು ಬರೆದಿದ್ದರು. ಆದರೆ, 1911ರಲ್ಲಿ ಜೈಲು ಸೇರಿದ ಆತ, ಬ್ರಿಟಿಷರ ನಿಷ್ಟಾವಂತನಾಗಿ ಬದಲಾದ. ಎರಡೇ ವಾರದಲ್ಲಿ ಕ್ಷಮೆ ಕೋರಿ ಪತ್ರ ಬರೆದ” ಎಂದು ವಿವರಿಸಿದರು.
“ಸಾವರ್ಕರ್ ಬ್ರಿಟಿಷರಿಗ ಬರೆದ 5ನೇ ಪತ್ರದಲ್ಲಿ,, ‘ನಾನು ನಿಮ್ಮ ಮನೆಯ ಮಗ. ಮಗನಿಗೆ ನೀವು ಪ್ರೀತಿ ತೋರಬೇಕು. ನೀವು ಏನೇ ಹೇಳಿದರೂ ಮಾಡುತ್ತೇನೆ’ ಎಂದು ಪತ್ರದಲ್ಲಿ ಬರೆಯುತ್ತಾರೆ. ಅದೇ ಸಮಯದಲ್ಲಿ ಹಿಂದು-ಮುಸ್ಲಿಮರ ಒಗ್ಗಟ್ಟನ್ನ ಮುರಿಯಲು ಬ್ರಿಟಿಷರಿಗೂ ಒಬ್ಬ ಬೇಕಿತ್ತು. ಅದಕ್ಕಾಗಿ, ಸಾವರ್ಕರ್‌ನಲ್ಲಿ ಬಳಸಿಕೊಂಡರು. ಹಿಂದು ಮಹಾಸಭಾ ಕಟ್ಟಲಿಕ್ಕೆ ಅವಕಾಶ ಕೊಟ್ಟರು” ಎಂದು ತಿಳಿಸಿದರು.
“ಯಲಹಂಕ ರಸ್ತೆಗೆ ಸಾವರ್ಕರ್ ಹೆಸರಿಟ್ಟಿದ್ದರು. ಅದಕ್ಕೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಯಿತು. ಆತ ಸ್ವಾತಂತ್ರ್ಯ ಹೋರಾಟಗಾರ ಅದಕ್ಕೆ ಆತನ ಹೆಸರಿಟ್ಟಿದ್ದೇವೆ ಅಂತ ಸರ್ಕಾರ ಸಮರ್ಥನೆ ಮಾಡಿಕೊಂಡಿತ್ತು. ಆತ ಕರ್ನಾಟಕದವನೇ ಅಲ್ಲ. ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನೇ ಇಡಬೇಕಿದ್ದರೆ ಕರ್ನಾಟಕದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಂತವರ ಹೆಸರಿಡಬೇಕಿತ್ತು” ಎಂದು ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್, ಮೀನಾಕ್ಷಿ ಬಾಳಿ, ಶಂಕುಲ್ ಇಸ್ಲಾಂ, ಡಾ. ಕೆ ಪ್ರಕಾಶ್ ಇದ್ದರು.