ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಅಂಗನವಾಡಿಗಳನ್ನು ಉಳಿಸಿ ಅಂಗನವಾಡಿಗಳನ್ನು ಬಲಪಡಿಸಿ ಎಂಬ ಘೋಷಣೆಯಡಿ ಅಂಗನವಾಡಿಗಳಲ್ಲೇ LKG-UKG ಪ್ರಾರಂಬಿಸಲು ಸರ್ಕಾರ ಅಧೀಕೃತ ತೀರ್ಮಾನ ಕೈಗೊಂಡು ಇದಕ್ಕೆ ಬೇಕಾದ ಅನುದಾನ ಬಿಡುಗಡೆ ಮಡುವುದು ಹಾಗೂ ನಿವೃತ್ತರಾಗಿರುವ ಎಲ್ಲಾ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ನೀಡಬೇಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವಧನ ಹೆಚ್ಚಿಸಬೇಕು ಮತ್ತು ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಪೌಷ್ಠಿಕ ಆಹಾರ ಸರಬರಾಜು ಮಾಡಬೇಕೆಂದು ಆಗ್ರಹಿಸಿ 2024 ಸೆಪ್ಟೆಂಬರ್ 19 ರಿಂದ ಬೆಂಗಳೂರಿನಲ್ಲಿ ಬೃಹತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ದೇಶದ ಬಡ ಮಹಿಳೆಯರು, ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಎದುರಿಸುತ್ತಿರುವ ಅಪೌಷ್ಟಿಕತೆ, ರಕ್ತ ಹೀನತೆ ಆರೋಗ್ಯ ಸಮಸ್ಯೆಗಳನ್ನು ತೊಡೆದು ಹಾಕುವ ಹಿನ್ನಲೆಯಲ್ಲಿ ಕಳೆದ ವರ್ಷಗಳ ಹಿಂದೆ ಆರಂಭಿಸಲಾದ ಸಮಗ್ರ ಶಿಸು ಅಭಿವೃದ್ಧಿ ಯೋಜನೆ (ICDS) ಪರಿಣಾಮಕಾರಿಯಾಗಿದೆ.ಈ ಯೋಜನೆಯಡಿ ಭಾರತಾದ್ಯಂತ ಸುಮಾರು 14 ಲಕ್ಷದಷ್ಟು ಹಾಗೂ ಕರ್ನಾಟಕ ರಾಜ್ಯದಲ್ಲಿ ಸುಮಾರು 70 ಸಾವಿರದಷ್ಟು ಅಂಗನವಾಡಿ ಕೇಂದ್ರಗಳು ಕಾರ್ಯೋನ್ಮುಖವಾಗಿದ್ದು ರಾಜ್ಯದಲ್ಲಿ ತಲಾ 70 ಸಾವಿರ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪರಿಶ್ರಮದಿಂದಾಗಿ ಆರು ವರ್ಷ ವಯೋಮಾನದವರೆಗಿನ ಮಕ್ಕಳು, ಬಾಣಂತಿಯರು, ಗರ್ಭಿಣಿಯರಲ್ಲಿ ಅಪೌಷ್ಠಿಕತೆ ರಕ್ತಹೀನತೆ ನಿವಾರಣೆ ಸಾದ್ಯವಾಗಿದೆ, ಮತ್ತು ಮಕ್ಕಳ ದೈಹಿಕ ಹಾಗೂ ಮಾನಸಿಕ ಕವಿಕಸನಕ್ಕೆ ಪೂರಕವಾಗಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಇಂತಹ ಮಹತ್ತರವಾದ ಯೋಜನೆಯನ್ನು ಮತ್ತಷ್ಟು ಬಲಗೊಳಿಸಿ. ಅಂಗನವಾಡಿ ವ್ಯವಸ್ಥೆಯನ್ನು ಉಳಿಸಿ ಬೆಳಸಬೇಕಾದ ಅನಿರ್ವಾತೆ ಇದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪ್ರಮುಖ ಅಂಗನವಾಡಿ ಸಂಘಟನೆಗಳು ಸರ್ಕಾರದ ಗಮನ ಸೆಳೆಯಲು ಹೋರಾಟವನ್ನು ಹಮ್ಮಿಕೊಂಡಿದ್ದು ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರವನ್ನು ಆಗ್ರಹ ಪಡಿಸುತ್ತೇವೆ ಎಂದು ತಿಳಿಸಿರುತ್ತಾರೆ.
ಬೇಡಿಕೆಗಳು ಏನೇನು?
ಗ್ರಾಚ್ಯುಟಿ ಸೌಲಭ್ಯ ನೀಡಲು ಒತ್ತಾಯಿಸಿ,ಗ್ರಾಚ್ಯುಟಿ ಪಡೆಯಲು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅರ್ಹರು ಎಂಬುದಾಗಿ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪನ್ನು ರಾಜ್ಯದಲ್ಲಿ ಜಾರಿಗೊಳಿಸಲು ಇವರು ನಿವೃತ್ತರಾದ ಎಲ್ಲರಿಗೂ ಗ್ರಾಚ್ಯುಟಿ ಸೌಲಭ್ಯ ನೀಡಲು ಆಡಳಿತಾತ್ಮಕ ವೆಂದರು.ಗೌರವಧನ ಹೆಚ್ಚಿಸಿ(ಕನಿಷ್ಠ ವೇತನ) ಆಡುಗಂಟು ನೀಡುವ ಯೋಜನೆ ಜಾರಿಗೆ ಆಗ್ರಹಿಸುತ್ತಿದ್ದೇವೆ ಎಂದರು.
ಅಂಗನವಾಡಿ ಕಾರ್ಯಕತೆಯರಿಗೆ ಮಾಸಿಕ 15000/- ಸಾವಿರ ಹಾಗೂ ಸಹಾಯಕಿಯರಿಗೆ 10000/- ಗೌರವಧನ ಹೆಚ್ಚಿಸುವ ಭರವಸೆಯಂತೆ ಗೌರವಧನ ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದು. ಹಾಗೂ ಹಾಲಿ ಇರುವ ಎನ್.ಪಿ.ಎಸ್ ಯೋಜನೆ ಲೋಪದೊಷಗಳಿಂದ ಕೂಡಿದ್ದು ಹಳೆ ಪೆನ್‌ಷನ್ ಯೋಜನೆ (OPS) ಜಾರಿಗೊಳಿಸಬೇಕೆಂದು ಅಂಗನವಾಡಿ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಪಡಿಸುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಅಂಗನವಾಡಿ ಕೇಂದ್ರಗಳಲ್ಲಿಯೇ LKG-UKG ಪ್ರಾರಂಭೀಸುವ ಕುರಿತುಈಗಾಗಲೆ ರಾಜ್ಯದ ಮುಖ್ಯಮಂತ್ರಿಗಳು ಅಂಗನವಾಡಿ ಕೇಂದ್ರಗಳಲ್ಲಿಯೇ LKG-UKG ಪ್ರಾರಂಭಿಸಲು ತಾತ್ವಿಕವಾಗಿ ಒಪ್ಪಿಗೆ ನೀಡಿರುವದನ್ನು ಹಾಗೂ ಅದನ್ನು ಕಾರ್ಯಗತಗೊಳಿಸಲು ಶಿಕ್ಷಣ ತಜ್ಞರು, ಅಂಗನವಾಡಿ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಲು ಸೂಚಿಸಿರುವದನ್ನು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ಒಕ್ಕೂಟದಿಂದ ಸ್ವಾಗತಿಸುತ್ತದೆ. ಹಾಗೂ ಕೂಡಲೇ ತಜ್ಞರ ಸಮಿತಿ ರಚಿಸಲು ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಆಗ್ರಹಿಸುತ್ತೇವೆ ಎಂಬುದಾಗಿದೆ.

ಇದರೊಂದಿಗೆ ಅಂಗನವಾಡಿಗಳಲ್ಲಿ LKG UKG ಪ್ರಾರಂಭಿಸಲು ಅಗತ್ಯವಾದ ಅನುದಾನ ಬಿಡುಗಡೆ, ಕೊಠಡಿಗಳು, ಪಾಠ-ಪೀಠೋಪಕರಣಗಳು ಸೇರಿದರೆತೆ ಮೂಲಭೂತ ಸಿದ್ದತೆಗಳನ್ನು ಮಾಡಬೇಕು LKG-UKG ಮಕ್ಕಳಿಗೆ ಬೋದಿಸಬೇಕಾದ ಪಠ್ಯಗಳನ್ನು ಸಿದ್ದಪಡಿಸಿ ಅಧೀಕೃತ ಮತ್ತು ಅಂಗೀಕೃತ ಪುಸ್ತಕಗಳನ್ನು ಮುದ್ರಿಸಿ ವಿತರಿಸಲು ಕ್ರಮವಹಿಸಬೇಕು ಹಾಗೂ ಮಕ್ಕಳಿಗೆ ಸಮವಸ್ತ್ರ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ.
ಗುಣಮಟ್ಟದ ಪೌಷ್ಟಿಕ ಆಹಾರ ಸರಬರಾಜು ಮಾಡಲು ಆಗ್ರಹಕರ್ನಾಟಕ ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗುತ್ತಿರುವ ಪೌಷ್ಠಿಕ ಆಹಾರವು ಕಳಪೆ ಗುಣಮಟ್ಟದಿಂದ ಕೂಡಿದ್ದಾಗಿದೆ ಎಂಬುದಾಗಿ ವ್ಯಾಪಕವಾಗಿ ದೂರುಗಳು ಬರುತ್ತಿದ್ದು ಆಹಾರದಲ್ಲಿ ಗುಣಮಟ್ಟ ಸರಿ ಇಲ್ಲದಿರುವುದರಿಂದ ಫಲಾನುಭವಿಗಳು ಸದರಿ ಪೌಷ್ಠಿಕ ಆಹಾರವನ್ನು ಸೇವಿಸುತ್ತಿಲ್ಲ ಸಮಗ್ರ ಶಿಸು ಅಭಿವೃದ್ಧಿ ಯೋಜನೆಯ ನಿಯಮಾವಳಿಗಳ ಅನುಸಾರ ಸ್ಥಳೀಯವಾಗಿ ದೊರಕುವ ಪೌಷ್ಠಿಕ ಆಹಾರ ನೀಡಬೇಕೆಂದು ಆಗ್ರಹಿಸುತ್ತೇವೆ ಎಂಬುದಾಗಿದೆ.
ನೇಮಕಾತಿ ವಯೋಮಿತಿ ಸಡಿಲಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಆಯ್ಕೆ ಮಡುವಾಗ ಈಗಿರುವ ವಯೋಮಿತಿಯನ್ನು ಸಡಿಲಿಸಿ ಎಸ್.ಸಿ.ಎಸ್.ಟಿ ಅಭ್ಯರ್ಥಿಗಳಿಗೆ 40 ವರ್ಷ ಸಮಾನ್ಯ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ ಹೆಚ್ಚಳ ಮಾಡಬೇಕು.
ಈ ಮೇಲಿನ ಎಲ್ಲಾ ಅಂಶಗಳನ್ನು ರಾಜ್ಯ ಸರ್ಕಾರ ಕೂಲಂಕುಶವಾಗಿ ಪರಿಶೀಲಿಸಿ ಈಡೇರಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಒತ್ತಾಯಿಸುತ್ತದೆ ಎಂದು ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
