ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಸಂವಿಧಾನದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಮನುಸ್ಮೃತಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಬೇಕು. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಶಿಕ್ಷಣ, ಅಧಿಕಾರ, ಆಸ್ತಿಯ ಹಕ್ಕನ್ನು ಸರ್ವ ಜಾತಿ ಜನಾಂಗಕ್ಕೆ ಕಲ್ಪಿಸಿ ಕೊಟ್ಟಿದ್ದಾರೆ. ನಮ್ಮ ಹಕ್ಕುಗಳನ್ನು ನಾವು ಪಡೆಯಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಚಾಲಕ ಮಾವಳ್ಳಿ ಶಂಕರ್ ಹೇಳಿದ್ದಾರೆ.
ಯಾದಗಿರಿಯಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ದಸಂಸ ಆಯೋಜಿಸಿದ್ದ ‘ಸಂವಿಧಾನ ಉಳಿಸಿ – ಪ್ರಜಾಪ್ರಭುತ್ವ ರಕ್ಷಿಸಿ’ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು. “ಸಂವಿಧಾನವನ್ನು ಗೌರವಿಸಬೇಕು ಮತ್ತು ಆಚರಿಸಬೇಕು. ದ್ಯಾವಮ್ಮ, ಮರಗಮ್ಮ, ಕೆಂಚಮ್ಮ, ಎಲ್ಲಮ್ಮ ಎಂದು ದೇವರುಗಳನ್ನು ಪೂಜಿಸುವುದನ್ನು ಬಿಡಬೇಕು. ಎಲ್ಲರೂ ಮೂಡನಂಬಿಕೆಗಳಿಂದ ಹೊರಬರಬೇಕು” ಎಂದರು.
ಕಾರ್ಯಕ್ರಮದಲ್ಲಿ ನಾಗಣ್ಣ ಬಡಿಗೇರ್. ರಮೇಶ್ ಡಕ್ಕಳಿಕಿ. ಭೀಮಣ್ಣ ಮೇಟಿ. ಭೀಮರಾಯ ಅಂಚೆ ಸೋಗುರು. ಗೌಡಪ್ಪಗೌಡ ಆಲ್ದಾಳ. ಮರಪ್ಪ ಚಟ್ಟರ ಕಾರ್. ರಾಮಣ್ಣ ಕಲ್ದೇವನಹಳ್ಳಿ. ಮರಳಿ ಸಿದ್ದಪ್ಪ ನಾಯಕಲ್. ಶರಣರೆಡ್ಡಿ ಹತ್ತಿಗೂಡುರ್. ಮಾಳಪ್ಪ ಕಿರದಳ್ಳಿ. ಚಂದ್ರಕಾಂತ್ ರಸ್ತಾಪುರ್. ಬಸವರಾಜ್ ಅಣಿಬಿ. ಪರಶುರಾಮ್ ರೋಜಾ. ಮಲ್ಲಿಕಾರ್ಜುನ್ ಅನಸುರ. ಅಶೋಕ್ ನಾಯ್ಕಲ್. ಗುರು ನಾಟಿಕರ್. ಶರಣಪ್ಪ ಸುರಪುರ. ಕಂಡಪ್ಪ ಸೇರಿದಂತೆ ಹಲವರು ಇದ್ದರು.
ವರದಿ | ಶರಣರೆಡ್ಡಿ