ಉಡುಪಿ ಜಿಲ್ಲೆಯಲ್ಲಿ” ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿಯವರು ಇದೇ ತಿಂಗಳ 13ನೇ ತಾರೀಖಿನಂದು ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ -2025 ರ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಪೊಲೀಸ್ ಇಲಾಖೆಯೂ ಕೂಡ ಅದಕ್ಕೆ ಅನುಮತಿಯನ್ನು ನೀಡಿತ್ತು. ಕಾರ್ಯಕ್ರಮಕ್ಕೆ ಸಮಿತಿಯು ಎಲ್ಲಾ ಪೂರ್ವಸಿದ್ಧತೆಯನ್ನು ಮಾಡಿಕೊಂಡಿತ್ತು. ಹೀಗಿದ್ದರೂ, ಪೆಹಲ್ಗಾಂ ಭೀಕರ ಹತ್ಯಾಕಾಂಡಕ್ಕೆ ಪ್ರತ್ಯುತ್ತರವಾಗಿ ದೇಶದ ಸೇನೆ ಪಾಕಿಸ್ತಾನದ ಉಗ್ರವಾದಿ ತಾಣಗಳ ಮೇಲೆ ದಾಳಿ ನಡೆಸಿದ್ದಕ್ಕೆ ಬೆಂಬಲವಾಗಿ ತನ್ನ ಉದ್ದೇಶಿತ ಪ್ರತಿಭಟನೆಯನ್ನು ಮುಂದೂಡಿದೆ.
ಇದನ್ನು ಓದಿ – https://eedina.com/karnataka/udupi-wakf-protest-cancle-pressmeet/2025-05-08/
ದೇಶದ ವಿಚಾರ ಬಂದಾಗ ಒಗ್ಗಟ್ಟಿನ ವಿಷಯದಲ್ಲಿ ಸಮಸ್ಯೆ ಆಗಬಾರದು ಹಾಗೂ ತಪ್ಪು ಮಾಹಿತಿ ರವಾನೆಯಾಗಿ ಸೇನೆ ಹಾಗೂ ಸರ್ಕಾರದ ನೈತಿಕ ಸ್ಥೈರ್ಯ ಕುಗ್ಗಬಾರದು ಎನ್ನುವ ಉದ್ದೇಶಕ್ಕೆ ಪ್ರತಿಭಟನೆಯನ್ನು ಮುಂದೂಡಿ ಸಮಿತಿ ಸರ್ವರ ಮೆಚ್ಚುಗೆಗೆ ಪ್ರಾಪ್ತವಾಗಿದೆ. ಇಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯು ತನ್ನ ಈ ನಿರ್ಧಾರವನ್ನು ಪ್ರಕಟಿಸಿ ದೇಶಪ್ರೇಮಕ್ಕೆ ಮಾದರಿಯಾಗಿದೆ.
Bevarshi rameshanannu sayisi
ಸಿಕ್ಕ ಸಿಕ್ಕ ಜಾಗಗಳನ್ನ ಕಬಳಿಸೋದು ಯಾವ ದೇಶ ಪ್ರೇಮ ರೀ.
ವರದಿಗಾರರಿಗೆ ವಿಶಾಲ ವಾಗಿ ಚಿಂತಿಸಿ ಬರೆಯಿರಿ
ನನ್ನ ಅಭಿಪ್ರಾಯದ ಪ್ರಕಾರ ಸರ್ಕಾರ ಎಲ್ಲಾ ವಕ್ಫ್ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಕು ಮತ್ತು ಆ ವಕ್ಫ್ ಮಂಡಳಿಯನ್ನು ರದ್ದುಗೊಳಿಸಬೇಕು ಏಕೆಂದರೆ ಆ ಮಂಡಳಿಯು ಮುಸ್ಲಿಮರ ನಡುವೆ ಮಾತ್ರ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಮತ್ತು ಹಿಂದೂಗಳು. ಇದು ಭಾರತ, ಆದ್ದರಿಂದ ಅವರು ಗೌರವಿಸಬೇಕು
ನೀನು ಕೂಡ ಭಾರತೀಯತೆ ಕುರಿತು ಬರೆಯುವುದ ಬಿಟ್ಟು, ನಿನ್ನ ಬರವಣಿಗೆಗಳಲ್ಲಿ ಬೇರೆ ವಾಸನೆ ಬರುತ್ತಿದೆ, ನಿನ್ನ ಮೂಲ ತೆಗೆಯಬೇಕಿದೆ.