ಕೊಪ್ಪಳ | ಮಹಿಳೆಯರ ಶಿಕ್ಷಣಕ್ಕಾಗಿ ಕ್ರಾಂತಿಕಾರ ಹೆಜ್ಜೆಯನ್ನಿಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ: ಶಂಶಾದ್ ಬೇಗಂ‌

Date:

Advertisements

ಭಾರತದ ಪ್ರಥಮ ಶಿಕ್ಷಕಿ, ನೊಂದವರ ಮಡಿಲಾಗಿ, ಶೋಷಿತ ಮಹಿಳೆಯರ ಎದೆಯಲ್ಲಿ ಅಕ್ಷರ ಬಿತ್ತಿದ “ಅಕ್ಷರ ಮಾತೆ” ಎಂದು ಹೆಸರಾದ ಸಾವಿತ್ರಿಬಾಯಿ ಪುಲೆ ದೇಶ ಕಂಡ ವೈಚಾರಿಕ ಶಿಕ್ಷಣ ತಜ್ಞೆ, ಶಿಕ್ಷಣ ವಂಚಿತ ದಲಿತ, ಶೂದ್ರರ ಮಕ್ಕಳ ಶಿಕ್ಷಣಕ್ಕೆ ತನ್ನ ಸರ್ವವನ್ನೂ ತ್ಯಾಗ ಮಾಡಿದ ತ್ಯಾಗಮಯಿ ಸವಿತ್ರಿಬಾಯಿ ಪುಲೆ ಜಯಂತಿಯನ್ನು ಕನಕಗಿರಿಯಲ್ಲಿ ಆಚರಿಸಲಾಯಿತು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ,ದಲಿತ ಒಕ್ಕೂಟ ಹಾಗೂ ವಿದ್ಯಾರ್ಥಿ ಬಂಧುತ್ವ ವೇದಿಕೆ ನೇತೃತ್ವದಲ್ಲಿ ದೇಶದ ಮೊಟ್ಟ ಮೊದಲ ಶಿಕ್ಷಕಿ ಮಾತೆ ಸಾವಿತ್ರಿ ಬಾಯಿ ಪುಲೆ ಅವರ ಜನ್ಮದಿನವನ್ನು ಆಚರಿಸಲಾಯಿತು.

ತಾಲೂಕು ನೌಕರರ ಸಂಘದ ಅಧ್ಯಕ್ಷೆ ಶಂಶಾದ್ ಬೇಗಂ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅಸ್ಪೃಶ್ಯ, ದಲಿತ, ಹಿಂದುಳಿದ ಮಹಿಳೆಯರಿಗೆ ಸನಾತನಿಗಳ ವಿರುದ್ಧ ಸೆಡ್ಡು ಹೊಡೆದು ರಕ್ತ ಸುರಿಸಿ ಶಿಕ್ಷಣವನ್ನು ನೀಡಿದರು. ಮಹಿಳೆಯರ ಬದುಕಿಗೆ ಬೆಳಕಾದರು; ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ‘ಮಹಿಳೆಯ ಉನ್ನತಿಗೆ ಶಿಕ್ಷಣವೇ ಮುಖ್ಯ’ ಎಂದು ಸಾವಿತ್ರಿಬಾಯಿ ಹೇಳಿದರು ಎಂದರು.

Advertisements

ಪುಲೆ ದಂಪತಿಗಳು ಶಿಕ್ಷಣದಲ್ಲಿ ಹೊಸ ಕ್ರಾಂತಿಯನ್ನು ಮಾಡಿದರು ಸಾವಿತ್ರಿ ಹೆಣ್ಣು ಮಕ್ಕಳಿಗೆ ಶಾಲೆ ತೆರೆದಾಗ ಈ ಸಂಪ್ರದಾಯಸ್ಥರು ಕೊಡಬಾರದ ಕಿರುಕುಳ ಕೊಟ್ಟರು ಅದನ್ನ ಧೈರ್ಯದಿಂದ ಹೆದುರಿಸಿ ಮಕ್ಕಳಿಗೆ ಪಾಠ ಬೋಧಿಸಿದಳು. ಅಷ್ಟು ಗಟ್ಟಿತನ ಬರಲು ಅವರ ಗಂಡ ಜ್ಯೋತಿಬಾ ಪುಲೆ ಒಂದು ಶಕ್ತಿಯಾಗಿದ್ದರು. ಸರ್ಕಾರಿ ಶಾಲೆಯಲ್ಲಿ ಬಡ ದಲಿತ ಹಿಂದುಳಿದ ಇತರೆ ಮಕ್ಕಳು ಹೆಚ್ಚಾಗಿ ಕಲಿಯುತ್ತಾರೆ ಹಾಗಾಗಿ ಎಲ್ಲರೂ ಸರ್ಕಾರಿ ಶಾಲೆಗಳ ಉನ್ನತಿಗೆ ಶ್ರಮಿಸಬೇಕು ಎಂದರು.

333 7

ಗಜಲ್ ಸಾಹಿತಿ ಅಲ್ಲಾಗಿರಿ ರಾಜ್ ಮಾತನಾಡಿ, “ಮಾತೆ ಸಾವಿತ್ರಿಬಾಯಿ ಪುಲೆ ಈ ದೇಶದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸಿದ ಮಹಾನ್ ಚೇತನ. ಅವರ ದಾರಿಯುದ್ಧಕ್ಕೂ ಅನೇಕ ಅಪಮಾನಗಳನ್ನ ಅನುಭವಿಸಿ ಬಡವರ, ದಲಿತರ, ದಮನಿತರ ಪರವಾಗಿ ದುಡಿದವರು. ಅಂತಹ ಮಹಾನ್ ವ್ಯಕ್ತಿಗಳ ಆದರ್ಶಪಾಲನೆಯನ್ನ ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಹಳ್ಳಿಗಳ ಗುಡಿಸಿಲಿನಲ್ಲಿ ಮಹಿಳೆಯರಿಗೆ ಅಕ್ಷರದ ಜ್ಞಾನವನ್ನು ಬಿತ್ತಿದರು” ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ವಿರೂಪಾಕ್ಷಪ್ಪ ಮಾತನಾಡಿ, “ಸಾವಿತ್ರಿಬಾಯಿ ಫುಲೆ ಅಂದಿನ ಸಮಾಜದಲ್ಲಿ ಬೆರುರಿದ್ದ ಜಾತಿ,ಅಸ್ಪೃಶ್ಯತೆ ಮೇಲು ಕೀಳು ಮೂಢನಂಬಿಕೆ ವಿರುದ್ಧ ಪತಿ ಜ್ಯೋತಿ ಬಾ ಫುಲೆ ಜೊತೆ ಸೇರಿ ಹೋರಾಡಿದರು. ವಿಧವಾ ಪುನರ್ ವಿವಾಹ, ಅಂತರ್ಜಾತಿ ವಿವಾಹಕ್ಕೂ ಪ್ರೋತ್ಸಾಹಿಸಿದರು.ವಿದ್ಯೆಯಿಂದ ನಾವೆಲ್ಲರೂ ಇಂದು ಮಹಿಳೆಯರನ್ನು ಗೌರವಿಸುತ್ತೇವೆ. ವಿದ್ಯೆಯಿಂದ ಇಂದು ಮಹಿಳೆ ಎಲ್ಲ ರಂಗಗಳಲ್ಲೂ ಪುರುಷ ಸಮಾನವಾಗಿ ಬೆಳೆದಿದ್ದಾಳೆ” ಎಂದರು.

ಇದನ್ನು ಓದಿದ್ದೀರಾ? ದಾವಣಗೆರೆ | ಧರ್ಮ-ಜಾತಿ ದುರ್ಬಳಕೆ ಮಾಡುವವರಿಂದ ಯುವಜನತೆ ದೂರವಿರಬೇಕು: ಸಿಎಂ ಸಿದ್ದರಾಮಯ್ಯ

ವಿದ್ಯಾರ್ಥಿ ಬಂಧುತ್ವ ವೇದಿಕೆ ಮುಖಂಡ ಬಾರಿಮರದಪ್ಪ ನಡಲಮನಿ ಮಾತನಾಡಿ, 19ನೇ ಶತಮಾನದಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ಸಾವಿತ್ರಿಬಾಯಿ ಫುಲೆ ಸನಾತನಿಗಳ ವಿರುದ್ಧ ಸೆಟೆದು ನಿಂತ “ಲೇಡಿ ಟೈಗರ್” ಎಂದರು. ಅಂದು ಅವರು ನಿಡಿದ ಶಿಕ್ಷಣ ಇಂದಿನ ಎಲ್ಲಾ ವರ್ಗದ ಮಹಿಳೆಯರು ಸುಶಿಕ್ಷಿತರಾಗಿ ಉನ್ನತ ಕ್ಷೇತ್ರದಲ್ಲಿ ಹೆಸರು ಮಾಡಲು ಕಾರಣವಾಗಿದೆ. ಅವರ ಆದರ್ಶ ಬದುಕು ನಮಗೆಲ್ಲ ದಾರಿ ದೀಪ ಎಂದರು.

ಸಂಶೋಧನಾ ವಿದ್ಯಾರ್ಥಿ ನಾಗೇಶ ಪೂಜಾರ್ ಮಾತನಾಡಿ, “ಕೇಂದ್ರವು ಮೇಲ್ವರ್ಗದ ನಾಯಕರು ಅಂದು ಸಾಮಾಜಿಕ ಆರ್ಥಿಕ ಶೈಕ್ಷಣಿಕ ರಂಗಕ್ಕೆ ದುಡಿದರು ಆದರೆ ಇಂದು ನಮ್ಮವರೇ ನಮ್ಮವರ ಪರ ನಿಲ್ಲದಿರುವುದು ಖೇದಕರ ಶಿಕ್ಷಣ ಇಂದು ಖಾಸಗಿಕರಣ ಕೇಸರಿಕರಣದಿಂದ ಹಾಳಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಗಂಗಾಧರ ಸ್ವಾಮಿ ಕಲ್ಬಾಗಿಲಮಠ, ಪಟ್ಟಣದ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ್, ಉಪಾಧ್ಯಕ್ಷರಾದ ಕಂಠಿರಂಗ ನಾಯಕ, ನೂರಸಾಬ ಗಡ್ಡಿಗಾಲ, ಮದರಸಾಬ, ಖಾದರಬಾಷ ಗುಂಡಿಹಿಂದ್ಲರ, ಪ್ರಗತಿಪರ ಪಾಮಣ್ಣ ಅರಳಿಗನೂರ , ನೀಲಕಂಠ ಬಡಿಗೇರ, ಬಸವಂತ ತಾಂಡಾ, ಸುಭಾಷ್ ಕಂದಕೂರ, ನಾಗೇಶ ಬಡಿಗೇರ, ಹರೀಶ್ ಪೂಜಾರ, ಚಂದ್ರೇಗೌಡ , ಶರಣೇಗೌಡ ಹುಲಸನಹಟ್ಟಿ, ಕೃಷ್ಣಪ್ಪ ಬಡಿಗೇರ, ಕನಕಪ್ಪ ಮ್ಯಾಗಡೆ, ಹನುಮೇಶ ವಾಲೇಕಾರ, ಮಂಜುನಾಥ ಯಾದವ್, ರಾಮಣ್ಣ ಆಗೋಲಿ, ರಮೇಶ ಬಡಿಗೇರ, ಮುಕ್ತುಂಸಾಬ ಚಳ್ಳಮರದ, ನೂರಮಹ್ಮದ ಸಂತ್ರಾಸ್ ಮತ್ತಿತರರು ಹಾಜರಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X