ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬಬಲಾದಿ ಗ್ರಾಮದಲ್ಲಿ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಜಯಂತಿ ಕಾರ್ಯಕ್ರಮ ಮಾಡಲಾಯಿತು.
ಒಡಲ ದನಿ ಮಹಿಳಾ ಒಕ್ಕೂಟ ಜಿಲ್ಲಾ ಮುಖಂಡರಾದ ಡಾ. ಭುವನೇಶ್ವರಿ ಕಾಂಬಳೆ ಮಾತನಾಡಿ, ಸಾವಿತ್ರಿಬಾಯಿ ಫುಲೆಯವರ ಹೋರಾಟದ ಬದುಕು ಬದಲಾವಣೆಯತ್ತ ಅವರು ಇಟ್ಟ ಹೆಜ್ಜೆ ಗುರುತುಗಳಾಗಿವೆ. ಅವಾಚ್ಯ ಬೈಗಳು, ಮೈಮೇಲೆ ಮಣ್ಣು ಕೆಸರು ಸಗಣಿ ಎರಚಿದರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಮುನ್ನಡೆದರು. ಶೋಷಣೆ, ದಬ್ಬಾಳಿಕೆ, ಅನ್ಯಾಯ ಜಾತಿ ವ್ಯವಸ್ಥೆಯನ್ನು ಎದುರಿಸಿದರು ಎಂದರು.
ಪ್ರಾಣಿಗಿಂತ ಕೀಳಾಗಿ ನೋಡಿದ್ದ ತಳ ಸಮುದಾಯದ ಜನರಿಗೆ ಯಾರು ಮುಟ್ಟಿಸಿಕೊಳ್ಳದೆ ಊರಿನ ಆಚೆ ಇಟ್ಟು ಅವರ ನೆರಳು ಯಾರ ಮೇಲೆ ಬೀಳಬಾರದೆಂದು ಕಟ್ಟಲೆಗಳು ದಾರಿಯಲ್ಲಿ ಉಗುಳು ಕೂಡ ಕೇಳಬೀಳದಂತೆ ಕತ್ತಿಗೆ ಟೆಂಗಿನ ಪಟ್ಟೆ ಸೊಂಟದ ಸುತ್ತಲೂ ಪೊರಕೆ ತಾವು ಮೆಟ್ಟಿದ ನೆಲವನು ಗುಡಿಸುತ್ತ ಸಾಗಬೇಕಿತ್ತು. ಅಸ್ಪೃಶ್ಯರಾಗಿದ್ದವರಿಗೆ ಯಾರೂ ಕೆಲಸ ಕೊಡದೇ, ವಿದ್ಯ ಇಲ್ಲದೇ ಕುಡಿಯಲು ಸಹ ನೀರು ಕೊಡದೆ ಆರೋಗ್ಯ ಕೆಟ್ಟರೇ ವೈದ್ಯರು ಚಿಕಿತ್ಸೆ ಕೊಡದ ಸಾಮಾಜಿಕ ಹಿನ್ನೆಲೆಯಲ್ಲಿ ಸಾವಿತ್ರಿಬಾಯಿ ಫುಲೆ ಬೆಳೆದರು ಎಂದರು.

ಸಾವಿತ್ರಿಬಾಯಿ ಫುಲೆ ಕಲಿಕಾ ಕೇಂದ್ರದ ಶಿಕ್ಷಕಿ ಲಕ್ಷ್ಮೀ ದ್ರಾವಿಡ್ ಮಾತನಾಡಿ, ಇಂಗ್ಲಿಷ್ ಶಿಕ್ಷಣ ಕಲಿತ ಜ್ಯೋತಿಬಾ ಫುಲೆ ಪಾಶ್ಚಾತ್ಯ ಚಿಂತಕರ, ಕ್ರಾಂತಿಕಾರಿಗಳ ಕುರಿತು ಓದವ ತಿಳಿಯುವ ಅವಕಾಶ ಸಿಕ್ಕಿತು. ಅಮೆರಿಕ ಚಿಂತಕ ಥಾಮಸ್ ಪೇನ್ ಅವರ ಪುಸ್ತಕ ರೈಟ್ಸ್ ಆಫ್ ಮ್ಯಾನ್ ಎಂಬ ಪುಸ್ತಕದ ವಿಚಾರಗಳು ಮನಸ್ಸಿನಲ್ಲಿ ಆಳವಾಗಿ ನಾಟಿದ್ದವು. ಸಮಾನತೆ ಪಡೆಯಬೇಕಾದರೆ ಶಿಕ್ಷಣ ಮುಖ್ಯ ಎಂದು ಸಾವಿತ್ರಿಬಾಯಿ ಫುಲೆ ಜೀವನದ ಗುರಿಯಾಗಿ ಒಪ್ಪಿಕೊಂಡರು. ಸಮಾಜದ ಪ್ರತಿರೋಧದ ನಡುವೆ ಅಂದಿನ ಕಟ್ಟಳೆಗಳನ್ನು ಮೀರಿ ಹೆಣ್ಣು ಮಕ್ಕಳಿಗೆ ಶಾಲೆಯ ತೆರೆದು ತಮ್ಮ ಜೀವನವೇ ಮುಡುಪಾಗಿಟ್ಟು ಶಿಕ್ಷಣದ ಅರಿವು ಮೂಡಿಸಿದವರು ಅಕ್ಷರದವ್ವ ಸಾವಿತ್ರಿಬಾಯಿ ಫುಲೆಯವರು. ಶಿಕ್ಷಣಧಾತೆ ಸರಸ್ವತಿಯಲ್ಲ, ಸಾವಿತ್ರಿ ಬಾಫುಲೆ. ಅಕ್ಷರಧಾತ ಗಣೇಶನಲ್ಲ, ಜ್ಯೋತಿ ಬಾಫುಲೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬೆಳಗಾವಿ | ತುಂಬು ಗರ್ಭಿಣಿಯ ಕೊಲೆ ಪ್ರಕರಣ: ಗಂಡನ ಅಣ್ಣನೇ ಕೊಲೆ ಆರೋಪಿ!
ಕಲಿಕಾ ಕೇಂದ್ರದ ಮಕ್ಕಳು ಸಾವಿತ್ರಿಬಾಯಿ ಫುಲೆ ಕುರಿತು ಹೋರಾಟದ ಹಾಡುಗಳನ್ನು ಹೇಳಿದರು. ರಮಾಬಾಯಿಸ್ವ್ -ಸಹಾಯ ಸಂಘದ ಭೈಜಾಬಾಯಿ ಹರಿಜನ, ಹಿರಿಯರಾದ ಕಲ್ಲಪ್ಪ ಹರಿಜನ, ಸಿದ್ದರಾಮ ಕಾಂಬಳೆ ಉಪಸ್ಥಿತರಿದ್ದರು.
