ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಎನ್‌ಎಸ್‌ಎಸ್ ಮತ್ತು ಸ್ಕೌಟ್ ಮತ್ತು ಗೈಡ್ಸ್ ಮಕ್ಕಳು, ಶಾಲಾ ಶಿಕ್ಷಕರು, ಉಪನ್ಯಾಸಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಕ್ಕೆ ಬರುವುದಕ್ಕೆ ಬಸ್ ಇಲ್ಲದೆ ಪರದಾಡುವಂತ ಪರಿಸ್ಥಿತಿ ಮಂಡ್ಯ ಜಿಲ್ಲೆ ಕೆಆರ್‌ಪೇಟೆ ತಾಲ್ಲೂಕಿನಲ್ಲಿ ಎದುರಾಗಿದೆ.

ಬಸ್ ಎಷ್ಟೊತ್ತಿಗೆ ಬರುತ್ತೆ ಎಂಬ ಮಾಹಿತಿ ಇಲ್ಲ, ಬರೀ ಬಸ್ ನಂಬರ್ ಕೊಟ್ಟರೆ ಯಾರನ್ನ ಸಂಪರ್ಕಿಸಬೇಕು ಹಾಗೂ ಅವರ ಫೋನ್ ನಂಬರ್ ಕೊಟ್ಟಿಲ್ಲ. ಅಲ್ಲೇ ಸ್ಥಳದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಶಾಲಾ ಶಿಕ್ಷಕರು ಕಾಯುತ್ತಿರುವುದನ್ನು ಸಾರ್ವಜನಿಕರು ಕಂಡು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ l ಊಟಕ್ಕೆ ಏಳು ಕೋಟಿ ಬಜೆಟ್: ಕೊಡೋದು ನೀರು ಸಾರು
ಮಂಡ್ಯ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಕೆಆರ್‌ಪೇಟೆ ತಾಲೂಕುಗಳಲ್ಲಿ ಒಂದು ಬ್ಯಾನರ್ ಕೂಡ ಅಳವಡಿಸಿಲ್ಲ, ನಮ್ಮ ತಾಲೂಕಿನ ಜನ ಗತಿಗೆಟ್ಟು ಹೋಗಿದ್ದೇವಾ, ನಾವು ಅವರಿಗೆ ಲೆಕ್ಕನೇ ಇಲ್ವಾ ಆಗಿದ್ರೆ, ಸಣ್ಣದೊಂದು ಬ್ಯಾನರ್ ಇಲ್ಲ ,ಎಲ್ಲಾ ಬ್ಯಾನರ್ ಬರೀ ಮಂಡ್ಯಕ್ಕೆ ಹಾಕಿದ್ರೆ ಹೆಂಗೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಜನರನ್ನು ಕರೆತರಲು ಮಾಡಿದ್ದ ಬಸ್ಸುಗಳ ವ್ಯವಸ್ಥೆಯನ್ನು ಪುನಃ ಅವರನ್ನ ಹಿಂದಿರುಗಿ ಬಿಡಲು ಮಾಡಲಿಲ್ಲ. ಎಲ್ಲವೂ ಅಸ್ತವ್ಯಸ್ತತೆ. ಬಹಳಷ್ಟು ಜನ ಮಂಡ್ಯದ ನಿವಾಸಿ ನಾಗರೀಕರು 200 ರೂ, 250 ರೂ ಕೊಟ್ಟು ಆಟೋದಲ್ಲಿ ಹಿಂದಿರುಗಿ ಬರುವಂತಾಯಿತು ಎಂದರು.