ಸಮಾಜದಲ್ಲಿ ಅಂಧಕಾರ ಮೌಢ್ಯತೆ ತಲೆ ಎತ್ತಿ ಮೆರೆದಾಡಿ ವಿಜ್ಞಾನ ಎಂಬುದು ಮೂಲೆಗುಂಪಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಅತ್ಯವಶ್ಯಕವಾಗಿದೆ ಎಂದು ವಿದ್ಯಾರ್ಥಿ ಸಂಘಟನೆ ಎಐಡಿಎಸ್ಒ ಮುಖಂಡರು ತಿಳಿಸಿದರು.
ಕಲಬುರಗಿ ಜಿಲ್ಲೆಯ ಶಹಾಬಾದ್ ನಗರದಲ್ಲಿ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯಿಂದ ವಿವಿಧ ಶಾಲೆಯ ವಿದ್ಯಾರ್ಥಿಗಳೊಂದಿಗೆ ವಿಜ್ಞಾನ ಎಂದರೇನು? ಎಂಬ ಬಗ್ಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ವಿಜ್ಞಾನ ಎಂಬುದು ಎಷ್ಟು ಮಹತ್ವವಾಗಿದೆ? ಮತ್ತು ವಿಜ್ಞಾನವನ್ನು ಬೆಳೆಸುವಲ್ಲಿ ಮಹಾನ್ ವಿಜ್ಞಾನಿಗಳಾದ ಮೇಡಂ ಮೇರಿ ಕ್ಯೂರಿ, ಬ್ರೂನೋ, ಐನ್ ಸ್ಟೀನ್, ಚಾರ್ಲ್ಸ್ ಡಾರ್ವಿನ್ ಇನ್ನೂ ಹಲವಾರು ಮಹಾನ್ ವ್ಯಕ್ತಿಗಳು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟಿದ್ದಾರೆ. ಹಾಗೂ ಇವರೆಲ್ಲರೂ ನಿಸ್ವಾರ್ಥವಾಗಿ ವಿಜ್ಞಾನಕ್ಕೆ ಕೊಡುಗೆ ನೀಡಿದ್ದಾರೆ ಎನ್ನುವುದರ ಬಗ್ಗೆ ಚರ್ಚಿಸಲಾಯಿತು.

ಇಂದು ಪಠ್ಯ ಪುಸ್ತಕಗಳಲ್ಲಿಯೂ ಸಹ ಎಷ್ಟೋ ಜನ ವಿಜ್ಞಾನಿಗಳ ಬಗ್ಗೆ ತಿಳಿಸುತ್ತಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೆ ಪುಸ್ತಕಗಳ ಹುಳುಗಳಾಗದೆ ವಿಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕೆಲವೊಂದು ವಿಜ್ಞಾನದ ಪ್ರಯೋಗಗಳ ಮುಖಾಂತರ ಎಐಡಿಎಸ್ಓ ಜಿಲ್ಲಾ ಸಮಿತಿ ಸದಸ್ಯರಾದ ಸ್ಪೂರ್ತಿ.ಆರ್ ಗುರಜ್ ಲಕರ್ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅಜಯ್ ಗುರಜ್ ಲಕರ್ , ಜಿಲ್ಲಾ ಸಮಿತಿ ಸದಸ್ಯರಾದ ಬಾಬು ಪವಾರ್ ಹಾಗೂ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಅಜಯ್ ಗುರಜ್ ಲಕರ್
