ಉತ್ತರ ಪ್ರೇಶದ ಸಂಭಲ್ ಮಸ್ಜಿದ್ ಪ್ರಕರಣ ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆ 1991ರ ಸ್ಪಷ್ಟ ಉಲ್ಲಂಘನೆ ಹಾಗೂ ಉತ್ತರ ಪ್ರದೇಶದ ಪೊಲೀಸರ ಗುಂಡಿಗೆ ಹತ್ಯೆಯಾದ ಅಮಾಯಕ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕೆಂದು ಎಸ್ ಡಿ ಪಿ ಐ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿದರು.
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ನವಲಿ ಸರ್ಕಲ್‌ನಲ್ಲಿ ಪ್ರತಿಭಟಿಸಿದ ಎಸ್‌ಡಿಪಿಐ ಕಾರ್ಯಕರ್ತರು, ಯೋಗಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಅಜ್ಮೀರ್ ಸಿಂಗನಾಳ ಉತ್ತರಪ್ರದೇಶದ ಪೊಲೀಸರು ಅಮಾಯಕ ಯುವಕರ ಮೇಲೆ ಹತ್ಯೆಗೈಯ್ಯುವ ಮೂಲಕ ಆರ್ ಎಸ್ ಎಸ್ ನ ಸಿದ್ಧಾಂತವನ್ನು ಗೋಸ್ಕರ ಯುಪಿ ಸರಕಾರ ಕೆಲಸ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಚುನಾವಣೆಯಲ್ಲಿ ಮುಸ್ಲಿಮರ ವೋಟ್ ಪಡೆದು ಚುನಾಯಿತ ಪ್ರತಿನಿಧಿಗಳಾಗಿ ನಿರಂತರ ಮುಸ್ಲಿಮರ ಮೇಲೆ ದೌರ್ಜನ್ಯವಾದರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್ ಡಿ ಪಿ ಐ ತಾಲೂಕು ಕಾರ್ಯದರ್ಶಿ ಇಮ್ರಾನ್ ಮಾತನಾಡಿ, ಸಂಭಲ್ ಮಸೀದಿ ಪ್ರಕರಣ ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆ 1991ರ ಸ್ಪಷ್ಟ ಉಲ್ಲಂಘನೆ ಸಂವಿಧಾನದ ಕಗ್ಗೊಲೆಯಾಗಿದೆ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರ ಚಟುವಟಿಕೆಗಳು ಮುಂದುವರಿಸುತ್ತಿದ್ದಾರೆ. ದೇಶವನ್ನು ರಕ್ಷಿಸಬೇಕಾದರೆ ನಾವೆಲ್ಲರೂ ಒಂದಾಗಿ ಮಸ್ಜಿದ್ ಮತ್ತು ಚರ್ಚ್ ಕೆಳಗೆ ಮಂದಿರ ಹುಡುಕುವ ಆರ್ ಎಸ್ ಎಸ್ ನ ಪ್ರೋಪಗೊಂಡಾ ವಿರುದ್ಧ ಹೋರಾಡಬೇಕಾಗಿದೆ ಎಂದರು.
ಇದನ್ನು ಓದಿದ್ದೀರಾ? ರಾಯಚೂರು | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಎಲ್ಲ ಶಾಸಕರ ಮನೆ ಮುಂದೆ ಡಿ.14ರಂದು ತಮಟೆ ಚಳವಳಿ
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ದಾವೂದ್ ಕಾರಟಗಿ, ಸದಸ್ಯರು ಉಮ್ಮರ್ ಕಲ್ಗುಡಿ , ಜಾವೀದ್ ಕಾರಟಗಿ , ಜಾಕಿರ್ ಮೆಹಬೂಬ್, ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
