ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಪು ಕ್ಷೇತ್ರ ಸಮಿತಿ ವತಿಯಿಂದ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಸಂಗ್ರಹ, ಉಡುಪಿ ಇದರ ಸಹಯೋಗದೊಂದಿಗೆ ಮಜೂರು ಪಂಚಾಯತ್ ಸಭಾಂಗಣದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ರಕ್ತದಾನಕ್ಕಿಂತ ಮುಂಚೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸಾಧಿಕ್ ಕೆ ಪಿ ಯವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜಿಲ್ಲಾಸ್ಪತ್ರೆ ರಕ್ತ ನಿಧಿ ಸಂಗ್ರಹಣಾ ವೈದ್ಯಾಧಿಕಾರಿ ವೀಣಾ ಕುಮಾರಿ ಆಗಮಿಸಿ ಉಡುಪಿ ಜಿಲ್ಲೆಯಲ್ಲಿ ರಕ್ತದ ತೀವ್ರ ಕೊರತೆ ಇದ್ದು ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ರಕ್ತದ ಕೊರತೆಯನ್ನು ನೀಗಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್, T.I.Y.A ಮಲ್ಲಾರ್ ಇದರ ಉಪಾಧ್ಯಕ್ಷರಾದ ಅಬ್ದುಲ್ ರಝಾಕ್, ರವಿ ಕರಂದಾಡಿ, ಮಾಲಕರು ಪೂಜಾ ಶಾಮಿಯಾನ, ಮುನೀರ್ ಕಲ್ಮಾಡಿ, ಸಮಾಜ ಸೇವಕರು ಉಡುಪಿ, ಎಸ್ ಡಿ ಪಿ ಐ ಕಾಪು ಪುರಸಭೆ ಸದಸ್ಯರಾದ ನೂರುದ್ದೀನ್, ಎಸ್ ಡಿ ಪಿ ಐ ಮುಖಂಡರಾದ ಅಬೂಬಕ್ಕರ್ ಪಾದೂರ್ ಮತ್ತು ಎಸ್ ಡಿ ಪಿ ಐ ಮಜೂರ್ ಪಂಚಾಯತ್ ಸಮಿತಿ ಅಧ್ಯಕ್ಷರಾದ ಶಂಶುದ್ದೀನ್ ಕರಂದಾಡಿ ಆಗಮಿಸಿದ್ದರು. ಶಿಬಿರದಲ್ಲಿ ಸುಮಾರು 94 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.