ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಭಾನುವಾರ ಸೋಷಿಯಲ್ ಡೆಮಾಕ್ರಟಿಕ್ ಮೂವ್ಮೆಂಟ್ ಆಫ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಅಮೀನ್ ಮೋಸಿನ್ ನೇತೃತ್ವದಲ್ಲಿ ಮಡಿಕೇರಿ ಮಾರುಕಟ್ಟೆ ಬಳಿ ಇಸ್ರೇಲ್ ದೇಶವು ಕದನ ವಿರಾಮ ಉಲ್ಲಂಘನೆ ಮಾಡಿ ಪ್ಯಾಲೇಸ್ತಿನ್ ಯುದ್ಧ ಪೀಡಿತ ಗಾಝಪಟ್ಟಿಯ ಮೇಲೆ ನಿರಂತರ ಆಕ್ರಮಣ ನಡೆಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಪುಟ್ಟ ಪುಟ್ಟ ಮಕ್ಕಳು ಸೇರಿದಂತೆ 600 ಕ್ಕು ಹೆಚ್ಚು ಜನರ ಮಾರಣಹೋಮ ನಡೆಸಿರುವುದು ಖಂಡನಿಯ, ಈ ಕೂಡಲೇ ಭಾರತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಶಾಂತಿ ಸ್ಥಾಪನೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಇಸ್ರೇಲ್ ದೇಶದೊಂದಿಗಿನ ಎಲ್ಲಾ ವಿಧದ ರಾಜತಾಂತ್ರಿಕ ಸಂಭಂದಗಳನ್ನು ಮೋಟಕುಗೊಳಿಸಿ, ಇಸ್ರೇಲ್ ಉತ್ಪನ್ನಳನ್ನು ಬಹಿಷ್ಕಾರ ಮಾಡುವಂತೆ ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ‘ ಲೈನ್ ಮನೆ ‘ ಜೀತ ಇಂದಿಗೂ ಜೀವಂತ
ಪ್ರತಿಭಟನೆ ವೇಳೆ ಜಿಲ್ಲಾಧ್ಯಕ್ಷ ಅಮೀನ್ ಮೋಸಿನ್, ನಗರ ಸಮಿತಿ ಉಪಾಧ್ಯಕ್ಷ ಮೈಕಲ್ ವೇಗಸ್, ಎಸ್ ಡಿ ಪಿ ಐ ಪಕ್ಷದ ನಗರ ಸಭಾ ಸದಸ್ಯರುಗಳು ಹಾಗೂ ಕಾರ್ಯಕರ್ತರು ಇದ್ದರು.