ಕೋಲಾರ ನಗರ ಹೊರವಲಯದಲ್ಲಿ ಅನುಮಾನಾಸ್ಪದವಾಗಿ ಇಟ್ಟುಹೋಗಿದ್ದ ಸೆನ್ಸಾರ್ ಸೂಟ್‌ಕೇಸ್ ಅನ್ನು ಬೆಂಗಳೂರಿನ ಬಾಂಬ್ ನಿಷ್ಕ್ರಿಯ ದಳ ತಜ್ಞರು ಬುಧವಾರ ಡಿಟೋನೇಟರ್ ಮೂಲಕ ಲಘು ಸ್ಫೋಟ ಮಾಡಿ ನಾಶಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರ ನಗರ ಹೊರವಲಯದ ಟಮಕ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬುಧವಾರ ಬೆಳಗ್ಗೆ ಅನುಮಾನಾಸ್ಪದವಾಗಿ ಸೂಟ್‌ಕೇಸ್ ಒಂದನ್ನು ಇಟ್ಟುಹೋಗಿದ್ದು, ಸೂಟ್‌ಕೇಸ್‌ನಿಂದ ನಿರಂತರವಾಗಿ ಶಬ್ಧ ಬರುತ್ತಿತ್ತು. ಇದು ನಗರದ ಜನರಲ್ಲಿ ಆತಂಕ ಹುಟ್ಟಿಸಿತ್ತು.

ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಮೂರು ಬಾರಿ ಪರಿಶೀಲನೆ ನಡೆಸಿದರು. ಈ ವೇಳೆ ಸೂಟ್‌ಕೇಸ್ ಒಳಗೆ ಏನೂ ಇರಲಿಲ್ಲ ಎಂಬುದನ್ನು ಕಂಡುಕೊಂಡರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದರು. ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆಯ ಬಳಿಕ ಡಿಟೋನೇಟರ್ ಮೂಲಕ ಲಘು ಸ್ಫೋಟ ಮಾಡಿ, ನಾಶಗೊಳಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಗಳಾರತಿ ಎತ್ತಬೇಕಾದ್ದು ಕಾವೇರಿಗಲ್ಲ, ಕಾಂಗ್ರೆಸ್ಸಿಗರಿಗೆ
ಪ್ರಾಥಮಿಕ ತನಿಖೆಯಲ್ಲಿ ಕ್ರೌನ್ ಕಂಪನಿಯ ಅತ್ಯಾಧುನಿಕ ಸೂಟ್‌ಕೇಸ್ ಎಂಬುದು ಗೊತ್ತಾಗಿದ್ದು, ಸೂಟ್‌ಕೇಸ್ ಯಾರು ತಂದು ಹಾಕಿದ್ದಾರೆ. ಉದ್ದೇಶವೇನು ಎಂಬುದರ ಕುರಿತು ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ಕೋಲಾರ ಎಸ್‌ಪಿ ನಿಖಿಲ್ ತಿಳಿಸಿದ್ದಾರೆ.

