ಶಕ್ತಿ ಯೋಜನೆ ಸಂಬಂಧ ಬಿಎಂಟಿಸಿ ಎಂಡಿ ಜಿ. ಸತ್ಯವತಿ ಅವರು ಬಸ್‌ನಲ್ಲಿ ಸಂಚರಿಸಿ ಮಹಿಳೆಯರ ಸಮಸ್ಯೆ ಆಲಿಸಿದರು.
ಅವರು ಬನಶಂಕರಿ ಡಿಪೋಗೆ ಭೇಟಿ ನೀಡಿ ನಿರ್ವಾಹಕ, ಚಾಲಕ ಮತ್ತು ಮೆಕ್ಯಾನಿಕ್ಗಳ ಕುಂದುಕೊರತೆಗಳನ್ನು ಆಲಿಸಿದ್ದು, ಬನಶಂಕರಿಯಿಂದ ಕೋಣನಕುಂಟೆ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸಿದರು. ಈ ವೇಳೆ ಚಾಲಕ ಮತ್ತು ನಿರ್ವಾಹಕರಿಗೂ ತಿಳುವಳಿಕೆ ನೀಡಿದರು.
ಈ ವೇಳೆ ಪ್ರಯಾಣಿಕರ ಅಹವಾಲುಗಳನ್ನು ಆಲಿಸಿದ ಅವರು, ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದು, ಐದು ಅಂಶಗಳ ಮೇಲೆ ಕಾರ್ಯನಿರ್ವಹಿಸುವ ಚಾಲನಾ ಸಿಬ್ಬಂದಿಯನ್ನು ಪ್ರಶಂಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಕಂದಕಕ್ಕೆ ಉರುಳಿದ ಖಾಸಗಿ ಬಸ್; ಮಹಿಳೆ ಸಾವು, ಹಲವರಿಗೆ ಗಾಯ
ಶಕ್ತಿ ಯೋಜನೆ ಅಡಿಯಲ್ಲಿ ನಿರ್ವಾಹಕರು ಮಹಿಳಾ ಪ್ರಯಾಣಿಕರಿಗೆ ವಾಹನಗಳಲ್ಲಿ ಚೀಟಿ ವಿತರಣೆ, ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತನೆ, ಶಕ್ತಿ ಯೋಜನೆ ಅಡಿಯಲ್ಲಿ ದಾಖಲಾತಿಗಳ ಪರಿಶೀಲನೆ, ವಾಹನಗಳಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೆ ಚೀಟಿ ವಿತರಣೆ, ಸಂಸ್ಥೆಯ ವಾಹನಗಳ ಸ್ವಚ್ಛತೆ ಸೇರಿದಂತೆ ಹಲವು ಮಾನದಂಡಗಳ ಮೇಲೆ ಚಾಲಕ ಹಾಗೂ ನಿರ್ವಾಹಕರನ್ನು ಬಿಎಂಟಿಸಿ ಎಂಡಿ ಸತ್ಯವತಿಯವರು ಶ್ಲಾಘಿಸಿದರು.