ಉಡುಪಿ | ಜಿಲ್ಲೆಯಲ್ಲಿ ಯೋಗಿ ಮಾದರಿ ಬುಲ್ಡೋಜರ್ ಕಾರ್ಯಾಚರಣೆ, ಕೊರಗ ಮಹಿಳೆ ಮನೆ ಧ್ವಂಸ !

Date:

Advertisements

ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಣತಿ ದೂರದಲ್ಲಿ ಬುಡಕಟ್ಟು ಜನಾಂಗದ ಕೊರಗ ವಿಧವೆ ಮಹಿಳೆ ಶ್ರೀಮತಿ ಗಂಗೆ ಕೊರಗ ಎಂಬ ಬಡ ಮಹಿಳೆಯು ತನ್ನಿಬ್ಬರು ಅಪಕ್ವ ಮಕ್ಕಳೊಂದಿಗೆ ಸುಮಾರು 40 ವರ್ಷಗಳಿಂದ ವಾಸಮಾಡಿಕೊಂಡಿದ್ದು. ಈಗ ಏಕಾಏಕೀ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕೊಲ್ಲೂರಿನ ಜಗದಾಂಭ ಟ್ರಸ್ಟ್ ನವರು ಉತ್ತರ ಪ್ರದೇಶದ ಯೋಗಿ ಮಾದರಿಯಲ್ಲಿ ವಾಸಿಸುತ್ತಿರುವ ಮನೆಯನ್ನು ಧ್ವಂಸ ಮಾಡಿ ದೌರ್ಜನ್ಯ ಎಸಗಿದ ಅಮಾನವೀಯ ಘಟನೆ ಕೊಲ್ಲೂರಿನಲ್ಲಿ ಗುರುವಾರದಂದು ನಡೆದಿದೆ.

1005100583

ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಅಂಬೇಡ್ಕರ್ ವಾದ ಜಿಲ್ಲಾ ಸಮಿತಿಯು ಸ್ಥಳಕ್ಕೆ ಭೇಟಿಕೊಟ್ಟು ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಉಡುಪಿ ಪ್ರಧಾನ ಸಂಚಾಲಕರಾದ ಮಂಜುನಾಥ್ ಗಿಳಿಯಾರು ರವರು, ಆದ್ಯಾತ್ಮ ಕ್ಷೇತ್ರದಲ್ಲಿ ದುರಾತ್ಮ ಕೃತ್ಯ ಉಡುಪಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತಾಗಿದೆ. ಈ ಅಮಾನವೀಯ ಘಟನೆ ಕೊಲ್ಲೂರಿನ ಜಗಧಂಬಾ ಟ್ರಸ್ಟ್ ಮಾಲೀಕ ಸರಕಾರಿ ಭೂಮಿಯನ್ನು ಕಬಳಿಸಿಕೊಳ್ಳುವ ಸಲುವಾಗಿ ಮನೆಯನ್ನು ಜೆ ಸಿ ಬಿ ಯಿಂದ ಕೆಡವಿ ಮನೆಯಲ್ಲಿರುವ ದಿನ ಬಳಕೆ ದಿನಸಿ ಸಾಮಾಗ್ರಿ ಬಟ್ಟೆ ಪಾತ್ರೆಪಗಡಿಗಳ ಸಮೇತವಾಗಿ ಯಾವುದೇ ಒಂದು ನೋಟೀಸು ನೀಡದೆ ಕೋರ್ಟಿನಿಂದ ಅದೇಶ ಇದೆ ಎಂದು ಕೆಡವಿದ ಅಮಾನವೀಯ ಘಟನೆಯನ್ನು ಇಂತಹ ಹೇಯ ಕೃತ್ಯವನ್ನು ಸಹಿಸಿಕೊಳ್ಳುವದಿಲ್ಲ, ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.

ಘಟನೆಯನ್ನು ಖಂಡಿಸುವ ಮೂಲಕ ತೀವ್ರ ಪ್ರತಿಭಟನೆ ನಡೆಸಿ ಮೆರವಣಿಗೆ ಮೂಲಕ ಪೋಲಿಸ್ ಇನ್ಸ್ಪೆಕ್ಟರ್ ಮತ್ತು ಕೊಲ್ಲೂರು ಪಂಚಾಯತ್ ಪಿಡಿಒ ಅವರಿಗೆ ಮನವಿ ಸಲ್ಲಿಸಿದರು.

Advertisements
1005100672

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲರಾದ ಶ್ಯಾಮ್ ರಾಜ್ ಭಿರ್ತಿ, ಕುಂದಾಪುರ ತಾಲೂಕು ಸಂಚಾಲಕ ಕೆ ಸಿ ರಾಜು ಬೆಟ್ಟಿನಮನೆ, ಬ್ರಹ್ಮಾವರ ತಾಲೂಕು ಸಂಚಾಲಕ ಕೆ ಹರಿಶ್ಚಂದ್ರ, ಬೈಂದೂರು ತಾಲೂಕು ಸಂಚಾಲಕ ಶಿವರಾಜ್ ಬೈಂದೂರು , ಸಂದೀಪ್ ಮರವಂತೆ ಕೊರಗ ಸಂಘಟನೆಯ ಸುಶೀಲಾ ನಾಡ, ಬೊಗ್ರ ಕೊರಗ, ಪುತ್ರನ್ ಹೆಬ್ರಿ ಮತ್ತು ಕೊರಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X