ಪ್ರಜಾ ಸೋಷಿಲಿಸ್ಟ್ ಪಾರ್ಟಿ ಪಿಎಸ್ ಪಿ ಇದರ ಮಾಜಿ ಉಡುಪಿ ಜಿಲ್ಲಾ ಸದಸ್ಯರಾಗಿದ್ದರು, ಉಡುಪಿಯ ಹಾಶಿಮಿ ಮಸೀದಿಯ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಟಿ. ಶಾರ್ಫುದ್ದಿನ್ ಅಸಾದಿ (93) ಇಂದು ಮುಂಜಾನೆ ತನ್ನ ನಿವಾಸ ಗೋಲ್ಡನ್ ಪ್ಲಾಜಾ ದಲ್ಲಿ ನಿಧನ ಹೊಂದಿದ್ದಾರೆ.
ಮೃತರು ಪತ್ನಿ, ಮೂರು ಗಂಡು, ನಾಲ್ಕು ಹೆಣ್ಣು ಮಕ್ಕಳು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಇವರ ಅಕಾಲಿಕ ನಿಧನಕ್ಕೆ ಹಾಶಿಮಿ ಮಸೀದಿಯ ಆಡಳಿತ ಸಮಿತಿ ಸಂತಾಪ ವ್ಯಕ್ತಪಡಿಸಿದೆ.
ಮೃತರ ವಿಶೇಷ ಪ್ರಾರ್ಥನೆಯು ( ನಮಾಜ್ -ಇ- ಜನಝ) ಇಂದು (ಸೋಮವಾರ) ಉಡುಪಿ ಹಾಶಿಮಿ ಮಸೀದಿಯಲ್ಲಿ ಸಂಜೆ 4.45 ನಡಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.