ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ಲಕ್ಷಾಂತರ ರೂ ಹಣ ದೋಚಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ನಡೆದಿದೆ. ಕೊನೆಗೂ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಶಿರಾಳಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.
ನಕಲಿ ಚಿನ್ನದ ನಾಣ್ಯ ಮಾರಾಟ ಪ್ರಕರಣಗಳಲ್ಲಿ ಕಳ್ಳರು ಪತ್ತೆಯಾಗೋದೇ ಅಪರೂಪ. ಅಂಥದ್ದರಲ್ಲಿ ಶಿರಾಳಕೊಪ್ಪ ಪಿಎಸ್ಐ ಪ್ರಶಾಂತ್ ನಡೆಡಸಿದ ಕಾರ್ಯಾಚರಣೆಯಲ್ಲಿ ಈ ಅಪರೂಪದ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ಡಿಸೆಂಬರ್ 29ರಂದು ಹಾಸನ ಮೂಲದ ಕಲ್ಲೇಶ್ ಎಂಬುವವರಿಗೆ ಧರ್ಮಸ್ಥಳದಲ್ಲಿ ಚಂದ್ರು ಎಂಬ ವ್ಯಕ್ತಿಯ ಪರಿಚಯವಾಗಿದೆ. ಶಆತ ಜನವರಿ 06 ರಂದು ಕಲ್ಲೇಶ್‌ಗೆ ಕರೆ ಮಾಡಿ, ಮನೆ ಪಕ್ಕದ ಜಾಗದಲ್ಲಿ 3 ಕೆಜಿ ಬಂಗಾರದ ನಾಣ್ಯಗಳು ಸಿಕ್ಕಿರುತ್ತವೆ. ಅವುಗಳನ್ನು ಮಾರಾಟ ಮಾಡಬೇಕಿದೆ ಎಂದು ಹೇಳಿದ್ದಾನೆ. ಆತನ ಮಾತು ನಂಬಿ ಕಲ್ಲೇಶ್, ಶಿರಾಳಕೊಪ್ಪಕ್ಕೆ ಬಂದು, ಚಂದ್ರು ಮತ್ತು ನವೀನ್ ಇಬ್ಬರು ಸೇರಿ ನೀಡಿದ ಒಂದು ಬಂಗಾರದ ನಾಣ್ಯ ಪಡೆದಿದ್ದಾನೆ. ಊರಿಗೆ ಹಿಂತಿರುಗಿ ಪರಿಶೀಲಿಸಿದಾಗ ಅದು ಅಸಲಿ ಚಿನ್ನದ ನಾಣ್ಯವಾಗಿತ್ತು. ಬಳಿಕ ಜನವರಿ 08 ರಂದು ಶಿರಾಳಕೊಪ್ಪಕ್ಕೆ ಬಂದು ಚಂದ್ರು ಮತ್ತು ನವೀನ್ ಇಬ್ಬರಿಗೆ ಐದು ಲಕ್ಷ ಹಣ ನೀಡಿ ಅವರಿಂದ 800 ಗ್ರಾಂ ತೂಕದ ನಾಣ್ಯಗಳನ್ನು ತೆಗೆದುಕೊಂಡು ಹೋಗಿ ಪರೀಕ್ಷಿಸಲಾಗಿ ಅವು ನಕಲಿ ಎಂದು ತಿಳಿದು ಬಂದಿದ್ದು, ತಾನು ಮೋಸ ಹೋಗಿರುವುದಾಗಿ ಕಲ್ಲೇಶ್‌ಗೆ ಅರಿವಾಗುತ್ತದೆ.
ಈ ಸುದ್ದಿ ಓದಿದ್ದೀರಾ?: ಸಿಎಂ ಸಿದ್ಧರಾಮಯ್ಯ ಬೆಂಬಲಿಸಿ ಅಹಿಂದ ಸಂಘಟನೆಯಿಂದ ಇಂದು ‘ಶಿಕಾರಿಪುರ’ ಬಂದ್‌ಗೆ ಕರೆ

ಕುಪಿತಗೊಂಡ ಕಲ್ಲೇಶ್, ತನಗೆ ಬಂಗಾರದ ನಾಣ್ಯಗಳೆಂದು ಸುಳ್ಳು ಹೇಳಿ ನಕಲಿ ನಾಣ್ಯ ನೀಡಿ ಹಣವನ್ನು ಪಡೆದು ಮೋಸ ಮಾಡಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೋರಿ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾರೆ. ಕೇಸ್ ಕೈಗಿತ್ತಿಕೊಂಡ ಪೊಲೀಸರ ತಂಡ ಜನವರಿ 29 ರಂದು ಸೊರಬ ತಾಲೂಕು ತತ್ತೂರು ಗ್ರಾಮದ ಆರೋಪಿ ಚಂದ್ರಪ್ಪ (48)ನನ್ನು ಬಂಧಿಸಿದೆ. ಆರೋಪಿಯಿಂದ ಪ್ರಕರಣ ಸಂಬಂಧ ರೂ 5,00,000/- ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
