ಶಿಕಾರಿಪುರ ಉಪವಿಭಾಗದ ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಶಕುನವಳ್ಳಿ ಗ್ರಾಮದ ವಾಸಿ ಶಂಭುಲಿಂಗಪ್ಪ ಬಿನ್ ಮಲ್ಲೇಶಪ್ಪ ಅವರ ಮನೆಯ ಬೀಗ ಮುರಿದು ಬೆಡ್‌ರೂಂನಲ್ಲಿಟ್ಟಿದ್ದ ಬೀರುವಿನಲ್ಲಿದ್ದ 8,49,000/- ರೂಪಾಯಿ ಮೌಲ್ಯದ ಬಂಗಾರದ ಮತ್ತು ಬೆಳ್ಳಿಯ ಆಭರಣ ಕಳ್ಳತನ ಮಾಡಿಕೊಂಡು ಹೋದ ಪ್ರಕರಣಕ್ಕ ಸಂಬಂಧಿಸಿದಂತೆ ಪೊಲೀಸರು ಕಳ್ಳನನ್ನು ಬಂಧಿಸಿ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಅಬ್ದುಲ್ ಸತ್ತರ್ ಬಿನ್ ಮೆಹಬೂಬ ಷರೀಫ್ (೨೭) ಬಂಧಿತ ವ್ಯಕ್ತಿ. ಈತ ಹಾನಗಲ್ ತಾಲೂಕು ಶ್ರೀಂಗೇರಿ ಗ್ರಾಮದ ನಿವಾಸಿಯಾಗಿದ್ದಾನೆ.

ವಶಕ್ಕೆ ಪಡೆದು ತನಿಖೆ ಕೈಗೊಂಡು ಪ್ರಕರಣದಲ್ಲಿ ಕಳ್ಳತನ ಮಾಡಿದ 8,49,000 ರೂ ಮೌಲ್ಯದ 135 ಗ್ರಾಂ ಚಿನ್ನದ ಮತ್ತು 200 ಗ್ರಾಂ ಬೆಳ್ಳಿಯ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.ಈ ಕಳ್ಳತನ ಜುಲೈ ೨೫ರ ಮಧ್ಯಾಹ್ನ ಮನೆಯ ಯಜಮಾನ ಬೀಗ ಹಾಕಿ ಜಮೀನಿಗೆ ಹೋದ ವೇಳೆ ಸಂಭವಿಸಿತ್ತು.
ಈ ಬಗ್ಗೆ ಆನವಟ್ಟಿ ಠಾಣೆಗೆ ಮನೆಯ ಯಜಮಾನ ದೂರು ನಡೀದ್ದರು. ಸೊರಬ ಸಿಪಿಐ ರಾಜಶೇಖರ್ ಎಲ್ ಸಿ, ಎಸ್ ಐ ಚಂದನ್ ಪಿ,ಎಸ್,ಐ ನೇತೃತ್ವ್ವದಲ್ಲಿ ಈತನನ್ನು ಬಂಧಿಸಲಾಗಿದೆ.