ಬೈಕ್‌ಗೆ ಅಡ್ಡಬಂದ ಕಾಡು ಪ್ರಾಣಿಯನ್ನ ತಪ್ಪಿಸಲು ಹೋಗಿ, ರಸ್ತೆ ಪಕ್ಕದ ಕಟ್ಟೆಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಶಿವಮೊಗ್ಗ ಜಿಲ್ಲೆಯ ಘಟನೆ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ. ಆತನ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಟ್ಟಿಗೆಹಳ್ಳಿ ಗ್ರಾಮದ ಗಣೇಶ್ (32) ಮೃತ ದುರ್ದೈವಿ. ತಾಲೂಕಿನ ಯರೆಕಟ್ಟೆ ಗ್ರಾಮದ ಬಳಿ ಈ ಘಟನೆ ನಡೆದಿದೆ. ಕಟ್ಟೆಗೆ ಬೈಕ್ ಢಿಕ್ಕಿಯಾದ ರಭಸಕ್ಕೆ ಗಣೇಶ್ ಸ್ಥಳದಲ್ಲೇ ಸಾವನಪ್ಪಿದ್ದು, ಆತನ ಪತ್ನಿ ರಂಜಿತಾ (27) ಗಂಭೀರವಾಗಿ ಗಾಯವಾಗಿದೆ.
ಪತ್ನಿ ರಂಜಿತಾರನ್ನು ಕೆಲಸಕ್ಕೆ ಬಿಡಲು ಕರೆದೊಯ್ಯುತ್ತಿದ್ದಾಗ, ಯರೆಕಟ್ಟೆ ಗ್ರಾಮದ ಭೂತಪ್ಪನ ಕಟ್ಟೆ ಬಳಿ ಬರುವಾಗ ಬೈಕ್‌ಗೆ ಅಡ್ಡ ಬಂದ ಕಾಡುಪ್ರಾಣಿ ತಪ್ಪಿಸಲು ಹೋಗಿ, ರಸ್ತೆ ಬದಿಯ ಕಟ್ಟೆಗೆ ಬೈಕ್ ಡಿಕ್ಕಿಯಾಗಿದೆ. ಪತಿ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿದರೆ, ರಂಜಿತಾ ಕಾಲು ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.