ಶಿಕಾರಿಪುರ, ಸಾಮಾಜಿಕ ಜಾಲತಾಣಗಳಲ್ಲಿ ನೆಚ್ಚಿನ ನಾಯಕರ ವಿರುದ್ದ ಅವಹೇಳನಕಾರಿ ಪೋಸ್ಟ್ ಹಾಕಿರುವವರು ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಿಕಾರಿಪುರ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅಭಿಮಾನಿಗಳ ಬಳಗದಿಂದ ಶಿಕಾರಿಪುರ ಠಾಣೆಯಲ್ಲಿ ದೂರು ದಾಖಲಿಸಲಗಿದೆ.
ಮಂಡ್ಯ ತಾಲೂಕು ಬಸರಾಳು ಗ್ರಾಮದ ಹೆಮಂತ್ ಕುಮಾರ್ ಮತ್ತು ಬೆನಹಟ್ಟಿ ಗ್ರಾಮದ ಮಹೇಶ್ ಎಂಬುವವರು ಜಾಲಾತಾಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರ ವಿರುದ್ದವಾಗಿ ಅಶ್ಲಿಲ ಪದಗಳನ್ನು ಬಳಸಿ ಅವಹೇಳನಕಾರಿಯಾಗಿ ನಿಂದಿಸಿದ್ದು ಇವರ ವಿರುದ್ದ ಸೂಕ್ತ ಕಾನೂನು ರೀತಿಯಾಗಿ ಕ್ರಮ, ಕೈಗೈಗೊಳ್ಳುವಂತೆ ಆಗ್ರಹಿಸಿ ಶಿಕಾರಿಪುರ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
ಈ ಸಂದರ್ಭ ಭಂಡಾರಿ ಮಾಲತೇಶ್, ಉಳ್ಳಿ ದರ್ಶನ್,ರಾಘವೇಂದ್ರ ನಾಯಕ್,ರಂಗಪ್ಪ ಕಾಗಿನೆಲೆ,ಲಾಯರ್ ನಿಂಗಪ್ಪ,ಬುಡೇನ್ ಸಾಬ್, ಮಂಜುನಾಥ್ ನಾಯಕ್,ಚರಣ್ ಬನ್ನೂರ್ ಉಪಸ್ತಿತರಿದ್ದರು.