ಶಿವಮೊಗ್ಗ | 76ನೇ ಸಂಸ್ಥಾಪನ ದಿನಾಚರಣೆಯನ್ನು ʼಕಪ್ಪು ದಿನʼ ಆಚರಿಸಿ ಪ್ರತಿಭಟನೆ

Date:

Advertisements

ಶಿವಮೊಗ್ಗ ಜಿಲ್ಲೆ ಶರಾವತಿ ಮುಳುಗಡೆ ಸಂತ್ರಸ್ತರಿಗಾದ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತ ಮುಖಂಡರು ‘ಶಿವಮೊಗ್ಗ ಜಿಲ್ಲಾ ರೈತ ಸಂಘ’ದ 76ನೇ ಸಂಸ್ಥಾಪನ ದಿನವನ್ನು ʼಕಪ್ಪು ದಿನʼವನ್ನಾಗಿ ಆಚರಿಸಿದ್ದಾರೆ. ಆ ಮೂಲಕ ಪ್ರತಿಭಟನೆ ದಾಖಲಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶರಾವತಿ ಮುಳುಗಡೆ ಸಂತ್ರಸ್ಥರು, ಚಕ್ರಾ, ವರಾಹಿ, ಸಾವೆಹಕ್ಕು, ಸಂತ್ರಸ್ಥರು, ಬಗರ್ ಹುಕುಂ ಸಂತ್ರಸ್ಥರು, ಅರಣ್ಯ ಭೂಮಿ ಸಂತ್ರಸ್ಥರ ವಿಚಾರದಲ್ಲಿ ಸರ್ಕಾರ ಮತ್ತು ಶಿವಮೊಗ್ಗ ಜಿಲ್ಲೆಯ ಜನ ಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಈ ವಿಚಾರದಲಿ 1973ರಲ್ಲಿ ರದ್ದಾಗಿದ್ದ ಟಾಸ್ಕ್ ಪೋರ್ಸನ್ನು ರಚನೆ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಟಾಸ್ಕ್ ಪೋರ್ಸ್ ರಚನೆ ಮಾಡಲು ಮುಂದಾಗದ ಸರ್ಕಾರದ ನಡೆಯನ್ನು ಪ್ರತಿಭಟನಾಕಾರರು ಖಂಡಿಸಿದ್ದಾರೆ.

ಅಧಿಕಾರಿಗಳ ಅಸಹಕಾರ ಮತ್ತು ದೌರ್ಜನ್ಯದಿಂದ ಬೇಸತ್ತು ಹಾಗೂ ಸಾಗರ ತಾಲೂಕಿನ ಕಂದಾಯ ಇಲಾಖೆಯ ಕಚೇರಿಗಳಲ್ಲಿ ರೈತರ ಭೂಮಿಗೆ ಸಂಬಂಧಿಸಿದ ದಾಖಲಾತಿ ಕಡತಗಳು ನಾಪತ್ತೆಯಾಗುತ್ತಿರುವುದನ್ನು ಖಂಡಿಸಿದರು.

Advertisements

ಸರ್ಕಾರದ ಆದೇಶವಿದ್ದರೂ ಆದೇಶದ ಪ್ರಕಾರ ರೈತರ ಕೆಲಸಗಳನ್ನು ಮಾಡದ ಅಧಿಕಾರಿಗಳ ನಡೆಯನ್ನು ಖಂಡಿಸಿ 04.01.2024ರಂದು ಸಂಭ್ರಮದಿಂದ ಆಚರಿಸಬೇಕಾಗಿದ್ದ ಸಂಸ್ಥಾಪನಾ ದಿನವನ್ನು, ʼಕಪ್ಪು ದಿನʼಎಂದು ಆಚರಿಸಿ ಈ ಮುಖಾಂತರ ಸರ್ಕಾರ ಮತ್ತು ಜನ ಪ್ರತಿನಿಧಿಗಳ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಡೆಯನ್ನು ಖಂಡಿಸಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಪ್ರತಿಭಟನಾ ಸಭೆಗೆ ಜಿಲ್ಲೆಯ ರೈತ ಬಾಂಧವರು ರೈತಪದ ಕಾಳಜಿಯುಳ್ಳ ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಪಾಲ್ಗೊಂಡಿದ್ದರು.

ಇಂದಿನ ಪೀಳಿಗೆ ಈ ತರ ಸಂಘಟನೆಯ ಉದ್ದೇಶಗಳನ್ನು ಅರಿತುಕೊಂಡು ಸಂಘಕ್ಕೆ ಸೇರ್ಪಡೆ ಆಗಬೇಕು ಎಂದು ಎಮ್‌.ಎನ್‌.ನಾಯಕ್ ಕರೆ ನೀಡಿದರು. ಎಲ್ಲ ಕಡೆ ಕಳ್ಳರೆ ತುಂಬಿದ್ದಾರೆ. ಈ ಅಧಿಕಾರಿಗಳು, ರಾಜಕೀಯ ಪಕ್ಷಗಳು ಎಲ್ಲ ಕಳ್ಳರು ಎಂದು ಎಮ್.ಎನ್. ನಾಯಕ ಹೇಳಿದರು.

ತಿ.ನಾ. ಶ್ರೀನಿವಾಸ ಮಾತಾನಾಡಿ, ಇವತ್ತಿನ ರಾಜಕಾರಣಿಗಳು ನಾಚಿಕೆ ಪಡಬೇಕು ಎಂದರು. ಗೋಪಾಲ್ ಗೌಡರ ಆಡಳಿತ ನೋಡಿ ಕಲಿಯಬೇಕು ಎಂದರು. ಹಕ್ಕು ಪತ್ರಕೊಡಲು ಯೋಗ್ಯತೆ ಇಲ್ಲದೆ ಇರುವ ಸರ್ಕಾರ. ಇದು ಎಂದು ಸರ್ಕಾರದ ವಿರುದ್ಧ ಹರಿ ಹಾಯ್ದರು. ಬಿಜೆಪಿ ಅವರು ಬರಿ ದೇವರ ಪೋಟೋ ಇಟ್ಟುಕೊಂಡು ಆಡಳಿತ ಕೇಳೋಕೆ ಹೊಗ್ತಾ ಇದಾರೆ.

ಬಿಜೆಪಿ ಸರ್ಕಾರ ಯಾವುದೇ ರೀತಿಯ ಪ್ರಯೋಜನ ಇಲ್ಲ. ಜನರಿಗೆ ಮೋಸ ಮಾಡೋದೆ ರಾಜಕೀಯ ಪಕ್ಷಗಳ ನಾಟಕ ಆಗಿದೆ. ದುಡ್ಡು ಕೊಟ್ಟು ಓಟು ಪಡೆಯುವ ಪ್ರತಿಯೊಬ್ಬ ರಾಜಕಾರಣಿ ಮಾಡೋ ಕೆಲಸ ನಿಮಗೆ ಚೂರಿ ಹಾಕೋದು ನೆನಪಿಡಿ ಎಂದರು.

ರೈತ ಸಂಘ ರಾಜ್ಯಾಧ್ಯಕ್ಷ ಜೊನಪ್ಪ ಪೂಜಾರಿ ಮಾತನಾಡಿ, ಅಧಿಕಾರಕ್ಕೆ ಬರೋ ಮೊದಲು ನಾಟಕ. ಅಮೇಲೆ ಅವರ ಚಿತ್ರ ಬೇರೇನೇ. ಆ ಪಕ್ಷ ಈ ಪಕ್ಷ ಅಲ್ಲ, ಎಲ್ಲ ಒಂದೇ, ಹೊರಾಟದಿಂದ ಅಧಿಕಾರಕ್ಕೆ ಬಂದರು ಕೊಡಾ ರೈತರಿಗೆ ಯಾವುದೇ ನ್ಯಾಯ ಸಿಗಲಿಲ್ಲ. ಬಡವರನ್ನು ಬಡಿದು ತಿನ್ನೋ ಜಾತಿ ಅವರದ್ದು ಎಂದು ರಾಜಕೀಯ ಪಕ್ಷಗಳ ವಿರಿದ್ಧ ಹರಿಹಾಯ್ದರು.

ಇಲ್ಲೆ ಹುಟ್ಟಿ ಇಲ್ಲೆ ಬೆಳೆದು ಇವತ್ತು ರಾಜ್ಯ ವ್ಯಾಪಿ ರೈತ ಸಂಘ ಸ್ತಾಪನೆ ಆಗಿದೆ ಎಂದರು. ಎಲ್ಲಾ ಕಾನೂನು ತಿದ್ದುಪಡಿ ಮಾಡಿದ್ದು ಯಾಕೆ? ಅವರ ಬೆಳೆ ಬೇಯಿಸಿಕೊಳ್ಳೊದಕ್ಕೆ. ಲೂಟಿ ಹೊಡೆಯೋದಕ್ಕೆ ಎಂದು ಸರ್ಕಾರದ ವಿರುದ್ಧ ಮಾತಾನಾಡಿದರು. 50,000 ರೈತರಿಗೆ ಅನ್ಯಾಯ ಆಗಿದೆ, ಅದಕ್ಕೆ ಈ ಬಾರಿಯ ಚುನಾವಣೆ ಬಹಿಷ್ಕಾರ ಮಾಡುಬೇಕು ಎಂದರು.

ಜಿಲ್ಲಾಧ್ಯಕ್ಷರು ದಿನೇಶ್ ಶರುವಾಳ ಮಾತನಾಡಿ, ಕಪ್ಪುದಿನ ಯಾಕೆ ಅಂದರೆ, ಅಧಿಕಾರ ಕಪ್ಪಾಗಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಅಧಿಕಾರಿಗಳಿಗೂ ಕಪ್ಪು ಕವೆದಿದೆ. ಸರ್ಕಾರ ಇನ್ನೂ ಎಚ್ಚೆತ್ತು ಕೊಂಡಿಲ್ಲ ಎಂದರೆ ನಾವು ಮುಂದಿನ ದಿನದಲ್ಲಿ ಉಗ್ರವಾಗಿ ಹೋರಾಟ ಮಾಡಬೇಕಾಗುತ್ತೆ. ಈ ಹೋರಾಟ ಕೇವಲ ಹೋರಾಟ ಅಲ್ಲ ಇದು ಎಚ್ಚರಿಕೆ, ಹೆಬ್ಬಟ್ಟುಗಳನ್ನು ಆಯ್ಕೆ ಮಾಡಿದ್ದು ನಮ್ಮ ತಪ್ಪಾಗಿದೆ ಎಂದು ತಮ್ಮ ಕ್ರೋಶ ಹೊರಹಾಕಿದರು.

ಈ ವೇಳೆ ದಿನೇಶ್ ಶಿರವಾಳ, ವಿ.ಜಿ. ಶ್ರೀಕರ್, ತೀ.ನಾ. ಶ್ರೀನಿವಾಸ್, ಚೂನಪ್ಪ ಪೂಜೇರಿ, ರವಿಕುಮಾರ್ ಬಲ್ಲೂರ್, ಸುರೇಶ್ ಪರಗಣ್ಣನವರ್, ರಾಜು ಪವಾರ್, ಶಶಿಕಾಂತ್ ಪಡಸಲಗಿ, ಮಹಂತೇಶ್ ಪೂಜೇರ್, ಪ್ರಕಾಶ್ ನಾಯ್ಕ, ರಾಜ್ಯ ವರಿಷ್ಟರು, ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ಕಾರ್ಯಕರ್ತರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X