ಶಿವಮೊಗ್ಗ | ಅರಣ್ಯ ಇಲಾಖೆಯ ವಾಹನ ಚಾಲಕನ ವಿರುದ್ಧ ದೂರು ದಾಖಲು

Date:

Advertisements

ಶಿವಮೊಗ್ಗ ಗ್ರಾಮಾಂತರದ ಹೊಳೆಹೊನ್ನೂರು ಗ್ರಾಮದಲ್ಲಿ ಟೊಮೆಟೊ ಗಿಡ ಕಟ್ಟಲು ಬಳಸುವ ಬಿದಿರಿನ ಕಡ್ಡಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ತಡೆದು ಮಾವಿನಕಟ್ಟೆ ಅರಣ್ಯ ಇಲಾಖೆ ಕಚೇರಿಗೆ ವಾಹನವನ್ನು ತಿರುಗಿಸು ಎಂದ‌ ಅರಣ್ಯ ಇಲಾಖೆ ವಾಹನ ಚಾಲಕನ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಜನವರಿ 13ರಂದು ಮುಂಜಾನೆ 3-30ರ ಸುಮಾರಿಗೆ ಅರಬಿಳಚಿ ಕ್ಯಾಂಪ್‌ ನಿವಾಸಿ ಪಳನಿ ಎಂಬುವವರು ಕೆಎ-14 ಬಿ-4256ರ 407 ವಾಹನದಲ್ಲಿ ಬಿದಿರು ಸೀಬನ್ನು ತುಂಬಿಕೊಂಡು ಕೂಡ್ಲಿಗೆರೆಯಿಂದ ದಾವಣಗೆರೆಯ ರೈತರಿಗೆ ಕೊಡಲು ಕೈಮರ ಮಾರ್ಗವಾಗಿ ಕೈಮರ ಸರ್ಕಲ್ ಹತ್ತಿರ ಹೋಗುತ್ತಿರುವಾಗ ʼಅರಣ್ಯ ಇಲಾಖೆʼ ಎಂದು ಫಲಕವಿರುವ ಬೊಲೆರೊ ಜೀಪೊಂದರಲ್ಲಿ ಬಂದವರು ಬಿದಿರು ಕಡ್ಡಿಗಳನ್ನು ಒಯ್ಯುತ್ತಿದ್ದ ವಾಹನವನ್ನು ಅಡ್ಡ ಹಾಕಿದ್ದರು.

ಪಳನಿಯವರ ಟ್ರ್ಯಾಕ್ಟರ್ ಅಡ್ಡ ಹಾಕಿ, ವಾಹನದಲ್ಲಿ ಏನಿದೆಯೆಂದು ತಪಾಸಣೆ ಮಾಡಿದ ವ್ಯಕ್ತಿ, ʼಈ ಬಿದಿರನ್ನು ಮಾವಿನಕಟ್ಟೆ ಅರಣ್ಯ ಇಲಾಖೆ ಕಚೇರಿಗೆ ಹೊಡೆಯೋʼ ಎಂದು ಗದರಿಸಿದ್ದಾನೆಂಬ ಆರೊಪ ಮಾಡಲಾಗಿದೆ.

Advertisements

ಪಳನಿಯವರು, ʼಇದು ಟೊಮೆಟೊ ಗಿಡಕ್ಕೆ ನೆಡುವ ಬಿದಿರಿನ ಕಡ್ಡಿ. ಇವುಗಳನ್ನು ದಾವಣಗೆರೆಗೆ ಹೊಯುತ್ತಿದ್ದೇನೆ ಎಂದಿದ್ದಾರೆ. ಅದಕ್ಕೆ, ʼನನಗೆ ಹಿಂದಿರುಗಿ ಮಾತನಾಡುತ್ತೀಯಾʼ ಎಂದು ಪಳನಿಯವರ ಕೊರಳಪಟ್ಟಿ ಹಿಡಿದು ಕಪಾಳಕ್ಕೆ ಹೊಡೆದು, ಅವರ ವಾಹನದಲ್ಲಿದ್ದ ಲಾಟಿಯನ್ನು ತೆಗೆದುಕೊಂಡು ಬಂದು ಮೈಕೈಗೆ ಹೊಡೆದಿದ್ದಾರೆಂದು ಆರೋಪಿಸಿದ್ದಾರೆ.

ಪಳನಿಯ ಜತೆಯಲ್ಲಿದ್ದ ಕೃಷ್ಣ ಮೂರ್ತಿಯವರು ಗಲಾಟೆ ಬಿಡಿಸಲು ಮುಂದಾದಾಗ ಅವರಿಗೂ ಹೊಡೆದು ಪಳನಿಯ ಮೊಬೈಲ್ ಕಸಿದುಕೊಂಡು ಜೀವ ಬೆದರಿಕೆ ಹಾಕಿ ಹೊರಟು ಹೋಗಿದ್ದಾನೆಂದು ದೂರಿನಲ್ಲಿ ದಾಖಲಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮಹಿಳಾ ಸುರಕ್ಷತೆಯ ಅರಿವು ಕಾರ್ಯಕ್ರಮ

ಪಳನಿಯವರು ಪರಿಚಯಸ್ತರಾದ ಅರತೊಳಲು ವಾಸಿ ಸಂದೀಪ ಹಾಗೂ ಅರಬಿಳಚಿ ಕ್ಯಾಂಪ್ ವಾಸಿ ಕೆ ರಾಮಲಿಂಗ ಅವರನ್ನು ಕರೆದುಕೊಂಡು ಅರಣ್ಯ ಇಲಾಖೆಯ ಕಚೇರಿಗೆ ಹೋಗಿ ವಿಚಾರಿಸಿದಾಗ ಹಲ್ಲೆ ಮಾಡಿದವನು ಅರಣ್ಯ ಇಲಾಖೆಯ ವಾಹನ ಚಾಲಕ ಅನಿಲ್ ಎಂದು ತಿಳಿದುಬಂದಿದೆ.

ಹೀಗೆ ಕರ್ತವ್ಯ ಮರೆತು ಅದಕ್ಕಿಂತ ಹೆಚ್ಚಿನ ಕೆಲಸ ಮಾಡಲು ಹೊರಟ ಚಾಲಕ ಅನಿಲ್ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

Download Eedina App Android / iOS

X