ಕೈ ಚೀಲದಲ್ಲಿ ನವಜಾತ ಶಿಶು ಪತ್ತೆಯಾಗಿರುವ ಅಮಾನವೀಯ ಘಟನೆ ಶಿವಮೊಗ್ಗ ಹೊರವಲಯದ ಶ್ರೀರಾಮ್ ಪುರ ಮೇಲ್ಸೇತುವೆ ಬಳಿ ನಡೆದಿದೆ.
ವೃದ್ಧೆ ಮಲ್ಲಿಕಮ್ಮ ಮಗುವನ್ನು ರಕ್ಷಿಸಿ, ಸ್ಥಳೀಯರ ಸಹಾಯದಿಂದ ಮಕ್ಕಳ ರಕ್ಷಣಾ ಸಮಿತಿಗೆ ವಿಷಯ ಮುಟ್ಟಿಸಿದ್ದಾರೆ. ಈಗ ಮಗು ಮೆಗ್ಗಾನ್ ಆಸ್ಪತ್ರೆಯ ಶಿಶು ಆರೈಕೆ ಕೇಂದ್ರದಲ್ಲಿದೆ.

ಸ್ಥಳೀಯರು ಮಗುವನ್ನು ಗಮನಿಸಿ ಕೂಡಲೇ ಆರೈಕೆ ಮಾಡಿದ್ದಾರೆ. ಮಗುವಿಗೆ ಬಿಸಿ ನೀರು ತಂದು ಸ್ನಾನ ಮಾಡಿಸಿ, ಮಗುವಿಗೆ ಚಳಿಯಾಗದಿರಲೆಂದು ಪಂಚೆಯಲ್ಲಿ ಸುತ್ತಿ, ತಲೆಗೆ ಬಟ್ಟೆ ಕಟ್ಟಿ, ಅದಕ್ಕೊಂದು ಚಿಕ್ಕ ಬಟ್ಟೆಯನ್ನೂ ಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಹುಬ್ಬಳ್ಳಿ | ಪ್ಲಾಸ್ಟಿಕ್ ಚೀಲದಲ್ಲಿ ನವಜಾತ ಶಿಶು ಪತ್ತೆ
ಸ್ಥಳೀಯ ತಾಯಂದಿರು, ಅಜ್ಜಿಯಂದಿರು ಒಟ್ಟಾಗಿ ಮಗುವಿಗೆ ಆ ಕ್ಷಣಕ್ಕೆ ಸಿಗಬೇಕಿದ್ದ ಆಸರೆ ನೀಡಿದರು. ತಮ್ಮ ಮಡಿಲಲ್ಲೇ ಮಗುವನ್ನು ಮಲಗಿಸಿಕೊಂಡು, ಮಗುವಿನ ಆರೈಕೆ ಮಾಡಿದ್ದಾರೆ. ಹೀಗೆ ಮಗುವನ್ನು ನೋಡಿಕೊಳ್ಳುತ್ತಿರುವಾಗಲೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಲಾಗಿದೆ. ಆರೋಗ್ಯವಾಗಿದ್ದ ಮಗು ಸದ್ಯ ಅಧಿಕಾರಿಗಳ ಸುಪರ್ದಿಯಲ್ಲಿದೆ. ಇನ್ನೊಂದೆಡೆ ಅಧಿಕಾರಿಗಳು ಮಗುವಿನ ಪೋಷಕರ ಪತ್ತೆಗೆ ಮುಂದಾಗಿದ್ದಾರೆ.
