ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಎಸ್ ಬಂಗಾರಪ್ಪ ನಗರ ಎಂದು ನಾಮಕರಣ ಮಾಡುವಂತೆ ಎಸ್. ಬಂಗಾರಪ್ಪ ಅಭಿಮಾನಿಗಳ ಸಂಘ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಶಿವಮೊಗ್ಗ ನಗರದ ಬೊಮ್ಮನಕಟ್ಟೆಯಲ್ಲಿ ಸುಮಾರು 25ವರ್ಷಗಳಿಂದ 6000ದಿಂದ 7000 ಆಶ್ರಯ ಮನೆಗಳು ನಿರ್ಮಾಣಗೊಂಡಿದ್ದು, 25,000ದಿಂದ 30,000 ಜನ ವಾಸವಾಗಿದ್ದಾರೆ. ಆದರೆ, ಈ ಬಡಾವಣೆಗೆ ಇದುವರೆಗೆ ಯಾವುದೇ ಹೆಸರಿನಿಂದ ನಾಮಕರಣ ಮಾಡಲಾಗಿಲ್ಲ. ಆದ ಕಾರಣ ಅಂದಿನ ಆಶ್ರಯ ಯೋಜನೆಯ ರೂವಾರಿ, ಆಶ್ರಯದಾತ, ದೀನದಲಿತರ ಬಂದು, ಬಡವರ ಆಶಾಕಿರಣ ಎಸ್.ಬಂಗಾರಪ್ಪನವರ ಹೆಸರನ್ನು ನಾಮಕರಣ ಮಾಡಬೇಕೆಂದು ಆಶ್ರಯ ನಿವಾಸಿಗಳು ಹಾಗೂ ನಮ್ಮ ಸಂಘದ ತೀರ್ಮಾನಿಸಿದ್ದು, ತಾವುಗಳು ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ‘ಎಸ್.ಬಂಗಾರಪ್ಪ ನಗರ’ ಎಂದು ನಾಮಕರಣ ಮಾಡಿ ಗೌರವ ಸಮರ್ಪಣೆ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ ಎಂದು ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಗೌರವ ಅಧ್ಯಕ್ಷ ಜಯಪ್ಪ ಜೆ. ಅಧ್ಯಕ್ಷ ಮಾಲತೇಶ ಕೆ, ಉಪಾಧ್ಯಕ್ಷರುಗಳು ಪ್ರಕಾಶ್ ಯು.ಕೆ. ರಾಮಕೃಷ್ಣ ಸಿ, ಮುಂತಾದವರು ಉಪಸ್ಥಿತರಿದ್ದರು.