ಶಿವಮೊಗ್ಗದ ಎನ್‌ಬಿ ರಸ್ತೆ, ಟೆಂಪೋ ಸ್ಟ್ಯಾಂಡ್ ಬಳಿಯ ವೃತ್ತದಲ್ಲಿ ಟ್ರಾಫಿಕ್ ಅವ್ಯವಸ್ಥೆ ಹಾಗೂ ಸಿಗ್ನಲ್‌ಲೈಟ್ ಅಳವಡಿಸದೇ ಅಪಘಾತಗಳಿಗೆ ಕಾರಣವಾಗುತ್ತಿರುವುದರಿಂದ ಕೂಡಲೇ ಟ್ರಾಫಿಕ್ ವ್ಯವಸ್ಥೆಯನ್ನು ಸುರಕ್ಷಿತಗೊಳಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ(ಎಎಪಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
“ಆಮ್ ಅದ್ದಿ ಪಾರ್ಟಿಯಿಂದ ಕಳೆದ ಅಕ್ಟೋಬರ್ 31ರಂದು ಟ್ರಾಫಿಕ್ ಅವ್ಯವಸ್ಥೆಯ ಕುರಿತು ಪ್ರತಿಭಟನೆ ನಡೆಸಿದ್ದು, ಟೆಂಪೋ ಸ್ಟ್ಯಾಂಡ್ ಬಳಿಯ ವೃತ್ತದಲ್ಲಿ ಸಿಗ್ನಲ್ ಅಳವಡಿಸುವಂತೆ ಹಲವು ಮನವಿ ಮಾಡಿದ್ದೆವು. ಆದರೂ, ಈವರೆಗೆ ಜಿಲ್ಲಾಧಿಕಾರಿ, ಟ್ರಾಫಿಕ್ ನಿಯಂತ್ರಣ ಅಧಿಕಾರಿಗಳು, ಯಾವುದೇ ಗಂಭೀರ ನಿರ್ಧಾರ ಅಥವಾ ಸೂಕ್ತಕ್ರಮ ವಹಿಸದೇ ಇರುವುದು ಖಂಡನೀಯ. ಇದರಿಂದ ಹಲವಾರು ರಸ್ತೆ ಅಪಘಾತಗಳು ಸಂಭವಿಸಿ ಪ್ರಾಣಹಾನಿ ಸಂಭವಿಸಿರುತ್ತವೆ” ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
“ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಂಗಳವಾರದಂದು ಮತ್ತೆ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಿಗ್ನಲ್ ಲೈಟ್ ಆಳವಡಿಸಿ ಟ್ರಾಫಿಕ್ ಅವ್ಯವಸ್ಥೆ ಸರಿಪಡಿಸಬೇಕು. ಟ್ರಾಫಿಕ್ ಸುವ್ಯವಸ್ಥೆ ಕಲ್ಪಿಸಬೇಕು” ಎಂದು ಆಗ್ರಹಿಸಿದರು.
“ಶಿವಮೊಗ್ಗ ನಗರದ ಮುಖ್ಯ ಭಾಗಗಳಾದ ಗಾಡಿಕೊಪ್ಪ, ಟೆಂಪೋ ಸ್ಟ್ಯಾಂಡ್, ಸೂಳೆಬೈಲು, ನ್ಯೂಮಂಡ್ಲಿ ಎಂಆರ್‌ಎಸ್ ಸರ್ಕಲ್, ಇಲ್ಯಾಸ್ ನಗರ ಸರ್ಕಲ್ ಇನ್ನೂ ಹಲವು ಭಾಗಗಳಲ್ಲಿ ನಿತ್ಯವೂ ಅತಿ ಹೆಚ್ಚು ವಾಹನ ದಟ್ಟಣೆಯಾಗುತ್ತಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಮೀಪದಲ್ಲಿಯೇ ಶಾಲೆಗಳಿದ್ದು, ಮಕ್ಕಳಿಗೆ, ಪಾದಚಾರಿಗಳಿಗೆ, ನಾಗರಿಕರಿಗೆ ಓಡಾಡಲು ಅನಾನುಕೂಲವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸರ್ಕಾರಿ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಆಗ್ರಹ
“ಟ್ರಾಫಿಕ್ ಸಿಗ್ನಲ್ ವ್ಯವಸಾಥೆ ಇಲ್ಲದಿರುವುದರಿಂದ ರಸ್ತೆ ದಾಟುವ ಸಂದರ್ಭದಲ್ಲಿ ಹಲವು ರೀತಿಯ ವಾಹನ ಅಫಘಾತಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಶಿವಮೊಗ್ಗ ಜಿಲ್ಲಾ ಆಮ್ ಆದಿ ಪಾರ್ಟಿ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಇದ್ದರು.