ಸಾಗರ-ಆನಂದಪುರ ಹೆದ್ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ತೀವ್ರ ರಕ್ತಸ್ರಾವದಲ್ಲಿದ್ದ ದಂಪತಿಯನ್ನು ತಮ್ಮ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಡುವ ಮೂಲಕ ಶಿವಮೊಗ್ಗ ಜಿಲ್ಲೆ ಸಾಗರ ಕ್ಷೇತ್ರದ ಶಾಸಕರು ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿರುವ ಬೇಳೂರು ಗೋಪಾಲಕೃಷ್ಣ ನೆರವಿಗೆ ಬಂದಿದ್ದಾರೆ.
ಸಿಗಂದೂರು ದೇವಸ್ಥಾನಕ್ಕೆ ತೆರಳಿ ಹಿಂದಿರುಗುತಿದ್ದ ದಂಪತಿ ಹೊಸಗುಂದ ದೇವಸ್ಥಾನದ ತಿರುವಿನಲ್ಲಿ ಅಪಘಾತಗೊಂಡು, ತೀವ್ರ ರಕ್ತಸ್ರಾವದಲ್ಲಿರುವುದನ್ನು ಗಮನಿಸಿದ ಶಾಸಕರು ಕೂಡಲೇ ತಮ್ಮ ವಾಹನ ನಿಲ್ಲಿಸಿ ಅವರನ್ನು ತಮ್ಮ ಬೆಂಗಾವಲು ವಾಹನದಲ್ಲಿಯೇ ಸಾಗರ ಆಸ್ಪತ್ರೆಗೆ ಕಳುಹಿಸಿ, ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಕಿ ಬಿಲ್ ಪಾವತಿ, ಕುಟುಂಬ ಕಲಹ ಕಾರಣಕ್ಕೆ ಕೆಆರ್ಐಡಿಎಲ್ ಗುತ್ತಿಗೆದಾರ ಪಿ ಎಸ್ ಗೌಡರ್ ಆತ್ಮಹತ್ಯೆ
ಪರಿಷತ್ ಚುನಾವಣೆ ಪ್ರಚಾರಕ್ಕಾಗಿ ಸಾಗರದಿಂದ ಆನಂದಪುರದ ಕಡೆಗೆ ಬರುತ್ತಿರುವಾಗ ಶಾಸಕರು ಮಾರ್ಗ ಮಧ್ಯ ಬೈಕ್ ಅಪಘಾತದಲ್ಲಿ ತೀವ್ರ ರಕ್ತಸ್ರಾವವಾಗಿದ್ದ ದಂಪತಿಗಳನ್ನು ನೋಡಿದ ಕೂಡಲೇ ತಮ್ಮ ವಾಹನದಲ್ಲಿಯೇ ಸಾಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಸಿದ್ದಾರೆ.
