ದೇಶದ ಅಪರೂಪದ ನಾಯಕ ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರಿಗೆ ಅನುಕೂಲವಾಗುವಂತಹ ಕಾನೂನು ಜಾರಿ ಮಾಡಿದಂತಹ ಮಹಾನಾಯಕ ಅಂಬೇಡ್ಕರ್ ಎಂದು ಡಿಎಸ್‌ಎಸ್ ಕರ್ನಾಟಕ ರಾಜ್ಯ ಬೆಂಗಳೂರು ವಿಭಾಗೀಯ ಸಂಚಾಲಕ ದೂಗೂರು ಪರಮೇಶ್ವರ್ ನೆನಪಿಸಿಕೊಂಡರು.
ಶಿವಮೊಗ್ಗ ಜಿಲ್ಲೆಯ ಸಾಗರದ ಚಾಮರಾಜಪೇಟೆಯ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಡಾ. ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದ ಮುಖಾಂತರ ಇಡೀ ದೇಶದಲ್ಲಿಯ ಪ್ರತಿಯೊಂದು ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸ್ವಾಭಿಮಾನದಿಂದ ಬದುಕುವಂಥ ಹಕ್ಕನ್ನು ನೀಡಿದ್ದಾರೆ. ಇಂತಹ ಸಂವಿಧಾನವನ್ನು ಅಲ್ಲಗಳೆಯುತ್ತಿರುವಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಒಕ್ಕಲಿಗ ಸ್ವಾಮೀಜಿ ಚಂದ್ರಶೇಖರ ಎಂಬಾತ ಮುಸಲ್ಮಾನರ ಮತದಾನದ ಹಕ್ಕನ್ನು ತೆಗೆಯಬೇಕು ಎಂದರೆ, ಉಡುಪಿ ಮಠದ ಪ್ರಸನ್ನತೀರ್ಥ ಸ್ವಾಮೀಜಿ ನಮನ್ನು ಗೌರವಿಸುವ ಸಂವಿಧಾನ ಬರಬೇಕು ಎನ್ನುತ್ತಾರೆ. ಇವರೆಲ್ಲರೂ ಮೊದಲು ಸಂವಿಧಾನವನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದೇಶದಲ್ಲಿ ಸೌಹಾರ್ದ, ಸಮಾನತೆ ತರುವಲ್ಲಿ ಅಂಬೇಡ್ಕರ್ ಕೊಡುಗೆ ಅಪಾರ: ಪ್ರೊ. ಲೋಕೇಶ್
“ಭಾರತ ದೇಶ ಜಾತ್ಯತೀತ ರಾಷ್ಟ್ರವಾಗಿದೆ. ಎಲ್ಲ ಜಾತಿ ವರ್ಗದವರಿಗೆ ಎಲ್ಲ ರೀತಿಯ ಹಕ್ಕುಗಳಿವೆ. ಸಂವಿಧಾನ ಬದಲಾವಣೆ ಮಾಡಬೇಕೆಂದು ಹೇಳುವ, ಸಂವಿಧಾನದ ಬಗ್ಗೆ ಗೌರವ ಇಲ್ಲದ ಸ್ವಾಮೀಜಿಗಳಾಗಲಿ, ಸಾಮಾನ್ಯರಾಗಲಿ, ಕುಬೇರರಾಗಲೀ ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗಲಿ. ಸಂವಿಧಾನ ಒಪ್ಪದೇ ಇರುವವರಿಗೆ ಭಾರತದಲ್ಲಿ ಇರಲು ಯಾವ ಯೋಗ್ಯತೆಯೂ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಜುನಾಥ್, ಧರ್ಮಣ್ಣ ಕೆಳದಿಪುರ, ಪ್ರಭಾಕರ್ ಸಾಗರ, ಗಣಪತಿಯಪ್ಪ, ತಾರಮೂರ್ತಿ, ನಂದಿನಿ, ಸುನಿಲ್ ಇದ್ದರು.