ಶಿವಮೊಗ್ಗದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ‘ಸ್ಪಾ’ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಆರು ಮಂದಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದಬಂದಿದೆ.
‘ಸ್ಪಾ’ ನಡೆಸುತ್ತಿದ್ದ ವಿದ್ಯಾಶ್ರೀ ಮತ್ತು ಆಕೆಯ ಗೋಪಾಲ್ ಅನ್ಯ ಊರುಗಳಿಂದ ಯುವತಿಯರನ್ನು ಕರೆತಂದು, ಅವರಿಗೆ ಹಣದ ಆಮಿಷವೊಡ್ಡಿ ವೇಶ್ಯಾ ವೃತ್ತಿಗೆ ದೂಡಿದ್ದರು ಎಂದು ಆರೋಪಿಸಲಾಗಿದೆ.
‘ಸ್ಪಾ’ದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಶಿವಮೊಗ್ಗ ಉಪವಿಭಾಗ-ಬಿ ಉಪಾಧೀಕ್ಷಕ ಸುರೇಶ್ ಎಂ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಆರು ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ.
ಸ್ಪಾ ಮಾಲೀಕ ಗೋಪಾಲ್ ಮತ್ತು ವಿದ್ಯಾಶ್ರೀಯನ್ನು ಬಂಧಿಸಿದ್ದಾರೆ.