ಶಿವಮೊಗ್ಗದ ನವುಲೆ ಇಂದಿರಾಗಂಧಿ ಬಡಾವಣೆಯಲ್ಲಿ ಗಾಂಜಾ ಮಾರುತ್ತಿದ್ದ ಆರೋಪಿಗಳನ್ನು ವಿನೋಬನಗರ ಪೊಲೀಸರು ಬಂಧಿಸಿದ್ದಾರೆ. ಬಡಾವಣೆಯಲ್ಲಿ ಯಾರೋ ಮೂರು ಜನ ಅಪರಿಚಿತರು ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ತಿಳಿದು ಪೊಲೀಸ್ ನೀರಿಕ್ಷಕ ಚಂದ್ರಕಲಾ ಎಚ್. ಹೊಸಮನಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ದಾವಣಗೆರೆ ಮೂಲದ ಆರೋಪಿ ಸಲ್ಮಾನ್ ಖಾನ್ ಎಂಬಾತನನ್ನು ವಶಕ್ಕೆ ಪಡೆಡೆದಿದ್ದಾರೆ. ಆರೋಪಿಯಿಂದ ಒಂದು ಲಕ್ಷ ರೂ. ಮೌಲ್ಯದ 2 ಕೆಜಿ 53 ಗ್ರಾಂ. ಗಾಂಜಾ, ತೂಕದ ಯಂತ್ರ, ಮೊಬೈಲ್, 500 ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.