ಶಿವಮೊಗ್ಗ ನಗರದ ವಿದ್ಯಾದೀಪ ಎಜುಕೇಶನ್ ಟ್ರಸ್ಟ್ ಕ್ರಿಯೇಟಿವ್ ಕಿಡ್ಸ್ ಶಾಲೆಯಲ್ಲಿ ನರ್ಸರಿಯಿಂದ ಯುಕೆಜಿವರೆಗಿನ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು.
ಪುಟಾಣಿ ಮಕ್ಕಳು ಖುಷಿಯಿಂದ ಸೌರ ಮಂಡಲದ ಬಗ್ಗೆ, ನೀರಿನ ಚಕ್ರದ ಬಗ್ಗೆ, ಟ್ರಾಫಿಕ್ ಆರೋಗ್ಯ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸರಳವಾಗಿ ವಿವರಣೆ ನೀಡಿದರು.
ಗಾನವಿ ಎಂಬ ಪುಟ್ಟ ಮಗು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, ಸೊಗಸಾಗಿ ಅಚ್ಚುಕಟ್ಟಾಗಿ ಸೌರಮಂಡಲದ ಬಗ್ಗೆ ವಿವರಣೆ ನೀಡಿತು” ಎಂದು ಹೇಳಿದರು.
ಮನ್ವಿತ್ ಎಂಬ ಮಗು ಮಾತನಾಡಿ, ಟ್ರಾಫಿಕ್ ಮತ್ತು ಅರೋಗ್ಯ ಬಗ್ಗೆ ವಿವರಣೆ ನೀಡಿತು. ಹೀಗೆ ಅನೇಕ ಮಕ್ಕಳು ತಾವು ಸಿದ್ಧಪಡಿಸಿಕೊಂಡಿದ್ದ ವಸ್ತುಗಳ ಬಗ್ಗೆ ವಿವರಣೆ ನೀಡಿದರು.
ಶಾಲೆಯ ಪ್ರಿನ್ಸಿಪಾಲ್ ದೀಪ ಆರ್ ಶೆಟ್ಟಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾವು ಪ್ರತಿವರ್ಷ ಈ ಕಾರ್ಯಕ್ರಮ ನಡೆಸುಕೊಂಡು ಬಂದಿದ್ದು, ಈ ಬಾರಿಯೂ ಕಾರ್ಯಕ್ರಮ ಮಾಡಿರುವುದು ಸಂತಸ ತಂದಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಕ್ತಕ್ರಾಂತಿ ಮತ್ತು ಉಗ್ರ ರಾಷ್ಟ್ರೀಯವಾದವನ್ನು ಕುವೆಂಪು ವಿರೋಧಿಸಿದ್ದರು: ಕೆ.ವಿ ನಾರಾಯಣ
ಪೋಷಕರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಮ್ಮ ಮಕ್ಕಳು ಹೀಗೆ ಅಚ್ಚುಕಟ್ಟಾಗಿ ವಿವರಣೆ ನೀಡಿದ್ದು ನಮಗೆ ಹೆಮ್ಮೆ ತಂದಿದೆ. ಇದನ್ನು ನೋಡಲು ಸಾರ್ವಜನಿಕರೂ ಕೂಡ ನೋಡಲು ಬಂದಿರುವುದು ತುಂಬಾ ಸಂತಸವಾಗಿದೆ” ಎಂದರು.