ಶಿವಮೊಗ್ಗ | ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ; ತಿಮ್ಲಾಪುರದ ಮಹಿಳೆಯರು ಸಂತಸ

Date:

Advertisements

“ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ” ಯಾವ ಸರ್ಕಾರ ಏನೇ ಮಾಡಿದರೂ 32 ವರ್ಷಗಳ ಕೆಳಗೆ ಬಂಗಾರಪ್ಪನವರು ಮಾಡಿದ ಕೆಲಸಗಳನ್ನು ಯಾರ ಕೈಯಿಂದಲು ಮೀರಿಸಲು ಸಾಧ್ಯವಿಲ್ಲವೆಂದು ಎಂದು ತಿಮ್ಲಾಪುರದ ಮಹಿಳೆಯರು ಸಂತಸ ಪಟ್ಟರು.

ಸಚಿವ ಮಧು ಬಂಗಾರಪ್ಪನವರು ಶಿವಮೊಗ್ಗಕ್ಕೆ ಹೋಗುವ ದಾರಿ ಮಧ್ಯ ಶಿಕಾರಿಪುರ ತಾಲೂಕಿನ ತಿಮ್ಲಾಪುರ ಗ್ರಾಮಕ್ಕೆ ಭೇಟಿ ನೀಡಿ ಗ್ಯಾರೆಂಟಿ ಕಾರ್ಡ್‌ಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದ ಸಂದರ್ಭ ಸ್ಥಳೀಯ ಗ್ರಾಮಸ್ಥರು ಹಾಗೂ ಮಹಿಳೆಯರು ಅಂದು ಪಂಪ್‌ಸೆಟ್‌ಗಳಿಗೆ ಶೆಡ್ಡು ಹೊಡೆದು ಅಂದು ನೀಡಿದ ಉಚಿತ ವಿದ್ಯುತ್ ಯೋಜನೆ ಇವತ್ತು ನಮ್ಮ ಮನೆ ಮನೆಗಳ ನಂದಾದೀಪವಾಗಿದೆ.

ಬಂಗಾರಪ್ಪನವರಿಂದ ನಮ್ಮ ಮನೆಗಳು ಸ್ಮರಣೀಯವಾಗಿ ಬೆಳಗುತ್ತಿದೆ. ಅದಕ್ಕಾಗಿ ನಿಮಗೆ ಹೃದಯಪೂರ್ವಕ ಸ್ವಾಗತ ನೀಡುತ್ತೇವೆಂದು ಆರತಿ ಮಾಡಿ ಸ್ವಾಗತಿಸಿದರು.

Advertisements

ಈ ಸಂದರ್ಭ ಬಂಗಾರಪ್ಪನವರ ಸ್ಮರಣೆ ಮಾಡಿದ ಗ್ರಾಮಸ್ಥರ ಜತೆಗೆ ಮಧುಬಂಗಾರಪ್ಪ ಮಾತನಾಡಿ, “ಅಂದು ಗ್ರಾಮೀಣ ಕೃಪಂಕಾ, ಆರಾಧನಾ, ಉಚಿತ ವಿದ್ಯುತ್ ಸೇರಿ ಹಲವು ಯೋಜನೆಗಳು ಯಶಸ್ವಿಯಾಗಿದ್ದು, ಇಂದಿಗೂ ಕೂಡ ಯಾವ ಸರ್ಕಾರವು ಅವರ ಜನಪರ ಯೋಜನೆಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಹೃದಯದಲ್ಲೂ ಬಂಗಾರಪ್ಪನವರು ಇದ್ದಾರೆ. ಈ ಬಾರಿ ಬಂಗಾರಪ್ಪನವರ ಮಗಳಾದ ಗೀತಕ್ಕನವರಿಗೆ ನಿಮ್ಮ ಮತ ನೀಡಿ” ಎಂದು ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಗ್ರಾಮಸ್ಥರು, “ಯಾರ ಬಗ್ಗೆಯೂ ಟೀಕೆ ಮಾಡದೆ ಬಂಗಾರಪ್ಪನವರ ಋಣ ತೀರಿಸಲು ನಮಗೆ ಒಳ್ಳೆಯ ಸುವರ್ಣ ಅವಕಾಶ. ಮಧು ಬಂಗಾರಪ್ಪನವರೇ ಈ ಬಾರಿ ನಿಮ್ಮ ತಂದೆಯವರ ಋಣ ತೀರಿಸಿಯೇ ತೀರಿಸುತ್ತೇವೆ” ಎಂದು ಮಧು ಬಂಗಾರಪ್ಪನವರಿಗೆ ಚೈತನ್ಯ ನೀಡಿದರು.

ಉತ್ತರಿಸಿದ ಮಧು ಬಂಗಾರಪ್ಪನವರು, “ಜಿಲ್ಲೆಯಲ್ಲಿ ಸಂಭ್ರಮದ ವಾತಾವರಣ ಇದೆ. ಗೀತಕ್ಕ ಈ ಬಾರಿ ಗೆದ್ದು ನಿಮ್ಮೆಲ್ಲರ ಸಮಸ್ಯೆಗಳ ಪರವಾಗಿ ನಿಲ್ಲುತ್ತಾರೆ. ಅವರ ಜೊತೆ ನಾನು ನಿಂತು ಕೈ ಜೋಡಿಸುತ್ತೇನೆ. ಹೆದರಬೇಡಿ ಧೈರ್ಯವಾಗಿರಿ” ಎಂದು ಭರವಸೆ ನೀಡಿದರು.

ಸ್ಥಳೀಯ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಧು ಬಂಗಾರಪ್ಪನವರಿಗೆ ಸ್ಥಳೀಯರು ಗೌರವ ಸಮರ್ಪಿಸಿದರು.

ಈ ಸುದ್ದಿ ಓದಿದ್ದೀರಾ? ಪುತ್ತೂರು | ಮತಗಟ್ಟೆಯೊಳಗೆ ಮೊಬೈಲ್ ತೆಗೆದುಕೊಂಡು ಹೋದ ಯುವಕ: ಪ್ರಕರಣ ದಾಖಲು

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳ ಶಿವರಾಂ, ಮುಖಂಡ ನಾಗರಾಜ್ ಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಮಾರವಳ್ಳಿ ಉಮೇಶ್, ರೇಣುಕಸ್ವಾಮಿ, ರಾಘವೇಂದ್ರ ನಾಯಕ್, ಶಿವು ಹುಲ್ಮಾರ್, ಸ್ಥಳೀಯ ಮುಖಂಡರಾದ ಷಣ್ಮುಖಪ್ಪ, ಚಿಕ್ಕಣ್ಣ, ಮಂಜುನಾಥ್, ಗದಿಗೆಮ್ಮ, ಹಳದಪ್ಪ ಸೇರಿದಂತೆ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X