ಶಿವಮೊಗ್ಗ ನಗರದ ಬಿ.ಹೆಚ್ ರಸ್ತೆ ಕರ್ನಾಟಕ ಸಂಘ ಪಕ್ಕದಲ್ಲಿರುವ ಮೇನ್ ಮಿಡ್ಲ್ ಸ್ಕೂಲ್, ಸರ್ಕಾರಿ ಪ್ರಧಾನ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ನಿನ್ನೆ (ಫೆ.22) ಮಕ್ಕಳ ಸಂತೆ ನಡೆಯಿತು.
ಸಂತೆಯಲ್ಲಿ ಮಕ್ಕಳು ಮನೆಯ ಹಿತ್ತಲಿನಲ್ಲಿ ನೈಸರ್ಗಿಕವಾಗಿ ಬೆಳೆದ ತರಕಾರಿಗಳು ಎಂದು ಕೂಗಿ ಹೇಳುತ್ತಿದ್ದರು. ಟೊಮೋಟೊ, ನೀರುಳ್ಳಿ, ಬದನೆಕಾಯಿ, ಚೋಳಿಕಾಯಿ, ಕೊತ್ತಂಬರಿ, ಕರಿಬೇವು, ಖಾರ ಮಂಡಕ್ಕಿ , ವಿವಿಧ ರೀತಿಯ ತರಕಾರಿಗಳು ಹಾಗೂ ತಿನಿಸುಗಳು ಕಂಡು ಬಂದವು.

ಮಕ್ಕಳಲ್ಲಿ ವ್ಯಾಪಾರ, ವ್ಯವಹಾರದ ಅರಿವನ್ನು ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಇದಾಗಿದ್ದು, ಮಕ್ಕಳ ಸಂತೆಯನ್ನು ಕಂಡು ಗ್ರಾಹಕರು ಸಂತೋಷ ಪಟ್ಟರು. ಮಕ್ಕಳು ಗ್ರಾಹಕರಿಗೆ ಪ್ಲಾಸ್ಟಿಕ್ ಇಲ್ಲ, ಕೈ ಚೀಲ ತನ್ನಿ ಎಂದು ಹೇಳಿದರು. ಗ್ರಾಹಕರು ಪೇಪರ್ ಕವರ್ ನಲ್ಲಿ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹ ನೀಡಿದರು.
ಈ ಸುದ್ದಿ ಓದಿದ್ದೀರಾ?:ಶಿವಮೊಗ್ಗ | ಅಧಿಕಾರಿಗಳು ರೈತರ ಹಿತ ಕಾಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ: ಮಧು ಬಂಗಾರಪ್ಪ
