ಶಿವಮೊಗ್ಗ ಹೊರವಲಯದ ಮಲವಗೋಪ್ಪದ ಶುಗರ್ ಫ್ಯಾಕ್ಟರಿ ಬಳಿ ಬುಧವಾರ (ಜ.10) ಸಂಜೆ ಅನುಮಾನಾಸ್ಪದ ರೀತಿ ಮೃತಪಟ್ಟಿರುವ ಎರಡು ಶವ ಪತ್ತೆಯಾಗಿವೆ.
ಒಬ್ಬ ಮಹಿಳೆ ಮತ್ತು ಒಬ್ಬ ಪುರುಷನ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭೇಟಿನೀಡಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ಕಾರಣ ಏನು ಎಂದು ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶವಗಳು ಗುರುತು ಪತ್ತೆಹಚ್ಚುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದು, ಇವರು ಯಾರು, ಈ ಶವಗಳು ಹೇಗೆ ಇಲ್ಲಿ ಬಂದವು ಎಂಬುದುನ್ನು ಇನ್ನಷ್ಟು ತನಿಖೆ ಮೂಲಕ ತಿಳಿಯಬೇಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.