ಸಾಗರ ತಾಲೂಕಿನ ಬರದವಳ್ಳಿಯ ಸರ್ವೆ ನಂ. 275ರಲ್ಲಿ 93 ಎಕರೆ ಮತ್ತು ಸರ್ವೆ ನಂ. 285ರಲ್ಲಿ 45 ಎಕರೆ ಅರಣ್ಯ ಭೂಮಿ ಉಳಿಸಿ, ಖಾಸಗಿ ವ್ಯಕ್ತಿಗಳ ಹುನ್ನಾರಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಬರದವಳ್ಳಿ ಗ್ರಾಮಸ್ಥರಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ತೆರಳಿ ಮನವಿ ಸಲ್ಲಿಸಿದರು.
ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಬರದವಳ್ಳಿ ಗ್ರಾಮ ಸುಧಾರಣಾ ಸಮಿತಿಯ ಅಶೋಕ್ ಮಾತನಾಡಿ, “ಬರದವಳ್ಳಿ ಕಂದಾಯ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯವರು ಸರ್ಕಾರಿ ಜಾಗ ಉಳಿಸಲು ಮುಂದಾಗದಿರುವ ಕಾರಣ ಬರದವಳ್ಳಿ ಗ್ರಾಮಸ್ಥರು ಪಾದಯಾತ್ರೆಯ ಮೂಲಕ ಸರ್ಕಾರಿ ಇಲಾಖೆಯ ಅಧಿಕಾರಿಗಳನ್ನು ಜಾಗೃತಗೊಳಿಸಲು ಹೋರಾಟ ಮಾಡುತ್ತಿದ್ದೇವೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕೋಮು ಉದ್ವಿಗ್ನತೆ ತಡೆಗೆ ಕಾನೂನು ಸುವ್ಯವಸ್ಥೆ; ಎಸ್‌ಪಿ ಮಿಥುನ್ ಕುಮಾರ್‌ಗೆ ಸನ್ಮಾನ
“ಸೊರಬ ವಿಧಾನಸಭಾ ಕ್ಷೇತ್ರ ಸಾಗರ ತಾಲೂಕಿನ ಬರದವಳ್ಳಿಯ ಸರ್ವೆ ನಂ. 275 ರಲ್ಲಿ 93 ಎಕರೆ ಮತ್ತು 285 ರಲ್ಲಿ 45 ಎಕರೆ ಅರಣ್ಯ ಜಾಗವನ್ನು ಗ್ರಾಮದ ದ್ಯಾವಪ್ಪ ಮತ್ತು ಸದಾಶಿವ ಸೇರಿದಂತೆ ಇತರರು ತಮಗೆ ಖಾತೆ ಮಾಡಿಸಿಕೊಳ್ಳಲು ಹುನ್ನಾರ ನಡೆಸಿ ಘನ ನ್ಯಾಯಾಲಯದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸೂಕ್ತ ದಾಖಲಾತಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಸರ್ಕಾರಿ ಜಾಗ ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು” ಎಂದು ಆಗ್ರಹಿಸಿದರು.