20 ಏಪ್ರಿಲ್ 2025 ರ ರಾತ್ರಿ ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ವಿಜಯಲಕ್ಷ್ಮಿ ರೈಸ್ ಮಿಲ್ ಆವರಣದಲ್ಲಿ ನಿಲ್ಲಿಸಿದ್ದ, 3 ಲಾರಿಗಳ ಇಂಧನ ಟ್ಯಾಂಕ್ ಗಳಿಂದ ಅಂದಾಜು 45,000 ರೂ. ಮೌಲ್ಯದ ಸುಮಾರು 450 ಲೀಟರ್ ಡೀಸೆಲ್ ಕಳ್ಳತನ ಮಾಡಲಾಗಿತ್ತು.
ಈ ಕುರಿತಂತೆ ಲಾರಿ ಮಾಲೀಕರಾದ ಸೊರಬ ತಾಲ್ಲೂಕು ಕೋಲಗುಣಸಿ ವಾಸಿಯಾದ ವಿಕ್ರಂ ಭಟ್ ಎಂಬುವರು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ನಿಲ್ಲಿಸಿದ್ದ ಲಾರಿಗಳಿಂದ ಸಾವಿರಾರು ರೂ. ಮೌಲ್ಯದ ಡೀಸೆಲ್ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಠಾಣೆ ಪೊಲೀಸರು ಶಿವಮೊಗ್ಗದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.ಶಿವಮೊಗ್ಗದ ಟಿಪ್ಪು ನಗರ ಬಲಭಾಗ 5 ನೇ ಕ್ರಾಸ್ ನಿವಾಸಿ ಸೋನು (26) ಹಾಗೂ ಭರ್ಮಪ್ಪ ನಗರದ ನಿವಾಸಿ ಸೈಯದ್ ಹುಸೇನ್ ಯಾನೆ ಗಫಾರ್ (25) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಆರೋಪಿಗಳಿಂದ 9 ಲಕ್ಷ ರೂ. ಮೌಲ್ಯದ ಟಾಟಾ ಇಂಟ್ರಾ ಸರಕು ಸಾಗಾಣೆ ವಾಹನ, 15 ಸಾವಿರ ನಗದು ಹಾಗೂ 5 ಖಾಲಿ ಕ್ಯಾನ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಇಲಾಖೆ ಮೇ 21 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಶಿಕಾರಿಪುರ ಡಿವೈಎಸ್ಪಿ ಕೇಶವ ಕೆ ಇ ಮೇಲ್ವಿಚಾರಣೆಯಲ್ಲಿ, ಇನ್ಸ್’ಪೆಕ್ಟರ್ ಸಂತೋಷ ಪಾಟೀಲ್ ನೇತೃತ್ವದಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆ ಸಬ್ ಇನ್ಸ್’ಪೆಕ್ಟರ್ ಪ್ರಶಾಂತ್ ಕುಮಾರ್ ಟಿ ಬಿ, ಸಿಬ್ಬಂದಿಗಳಾದ ಸಿ.ಹೆಚ್.ಸಿ ಸಂತೋಷಕುಮಾರ ಆರ್, ಸಿ.ಪಿ.ಸಿ ರಾಕೇಶ್ ಜಿ ಮತ್ತು ಸಲ್ಮಾನ್ ಖಾನ್ ಹಾಜಿರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ಧಾರೆ.