ಶಿವಮೊಗ್ಗ ನಗರದ ಮಲ್ಲಿಕಾರ್ಜುನ ಚಿತ್ರಮಂದಿರ ಪಕ್ಕದಲ್ಲಿರುವ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ಖ್ಯಾತ ಲೇಖಕ ಹಾಗೂ ಚಿಂತಕ ಡಾ. ರೆಹಮತ್ ತರೀಕೆರೆ ಅವರೊಂದಿಗೆ ಜನವರಿ 25ರ ಸಂಜೆ 6ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನೂತನವಾಗಿ ಪ್ರಕಟವಾಗಲಿರುವ ರಹಮತ್ ತರೀಕೆರೆಯವರ ಬಹುತ್ವ ಕರ್ನಾಟಕ ಪುಸ್ತಕದ ಕುರಿತು ಆಪ್ತ ಸಮಾಲೋಚನೆಯನ್ನು ನಡೆಸಲಾಗುವುದು.
ಈ ಸುದ್ದಿ ಓದಿದ್ದೀರಾ? ‘ಕುವೆಂಪು ರಾಷ್ಟ್ರೀಯ ಪ್ರಶಸ್ತಿ’ಗೆ ಗುಜರಾತಿ ಲೇಖಕಿ ಹಿಮಾಂಶಿ ಇಂದುಲಾಲ್ ಶೆಲತ್ ಆಯ್ಕೆ
“ಈ ಪುಸ್ತಕದ ಕುರಿತಾಗಿ ಪ್ರೊಫೆಸರ್ ಸಿರಾಜ್ ಅಹಮದ್ ಮಾತನಾಡಲಿದ್ದು, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸಬೇಕು” ಎಂದು ಆಯೋಜಕರು ಕೋರಿರುತ್ತಾರೆ.