ರಾಮಣ್ಣ ಶ್ರೇಷ್ಠಿ ಪಾರ್ಕ್ ನ ಬಾಲಗಂಗಾಧರ ನಾಥ್ ತಿಲಕ್ ಮಂಟಪದ ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ನವತಿಯಿಂದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನ ನ್ಯಾಯಾಧೀಶರಾದ ಮಂಜುನಾಥ ನಾಯ್ಕ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪೊಲೀಸ್ ಠಾಣೆಗೆ ಹೋಗುವುದನ್ನ ಭಾರತೀಯ ನಾಗರೀಕ ಕನಸು ಮನಸಿನಲ್ಲೂ ಎಣಿಸೊಲ್ಲ. ಆದರೆ ಪೊಲೀಸ್ ಠಾಣೆಯನ್ನ ನಾಗರೀಕರೊಂದಿಗೆ ಬೆಸೆಯುವ ಕೆಲಸಕ್ಕೆ ಇಲಾಖೆ ಇಳಿದಿದೆ. ಈ ಹಿಂದೆ ಇಲಾಖೆ ಜನಸ್ನೇಹಿ ಆಗಿರಲಿಲ್ವಾ ಇಲ್ಲ ಎಂಬ ಪ್ರಶ್ನೆಗೆ ಉತ್ತರ ಹೇಳಲ್ಲ. ಇದೆ ಅಂತನೂ ಹೇಳಲ್ಲ. ಇಲ್ಲ ಅಂತನೂ ಹೇಳಲ್ಲ.

ನಾನು 26 ವರ್ಷದಿಂದ ನ್ಯಾಯಾಧೀಶರಾಗಿ ಸೇವೆಸಲ್ಲಿಸುತ್ತಿರುವೆ. ಪೊಲೀಸ್ ಇಲಾಖೆಯನ್ನ ಹತ್ತಿರದಿಂದ ನೋಡಿದ್ದೇನೆ. ಚಿಕ್ಕಮಕ್ಕಳಿರುವಾಗಲೇ ಪೊಲೀಸರ ಬಗ್ಗೆ ಹೆದರಿಕೆ ಹುಟ್ಟಿಸುತ್ತೇವೆ. ರಕ್ಷಣೆಗಾಗಿ ಇರುವವರು ಎಂಬ ಭಾವನೆ ಮೂಡಿಸಬೇಕು ಭಯ ಹುಟ್ಟಿಸಬಾರದು ಎಂದರು.
ಇವುಗಳ ನಡುವೆ ಮನೆ ಮನೆ ಪೊಲೀಸ ಕಾನ್ಸೆಪ್ಟ್ ಉಪಯೋಚಿತವಾಗಿದೆ. ಮನೆ ಮನೆಗೆ ಹೋಗುವಾಗ ಪೊಲೀಸರಿಗೆ ಕಿವಿಮಾತು ಹೇಳಿದ ಜಡ್ಜ್ ಸಮವಸ್ತ್ರದಲ್ಲಿ ಹೋಗಲು ನಿರ್ಬಂಧನೆ ಇದೆಯಾ ಅಥವಾ ಇಲ್ಲವಾ ಎಂಬುದನ್ನ ಪರಿಶೀಲಿಸಿ. ಸಮವಸ್ತ್ರ ಕಡ್ಡಾಯ ಇಲ್ಲ ಎಂಬುದು ಖಾತ್ರಿಯಾದರೆ ಸಮವಸ್ತ್ರ ಬಿಟ್ಟು ಸಿವಿಲ್ ಡ್ರೆಸ್ ನಲ್ಲಿ ಹೋಗಿ.
ಮಕ್ಕಳನ್ನ ಆಕರ್ಷಿಸಿ. ನಮ್ಮ ವಿಚಾರವನ್ನೇ ಮುಂದು ಇಡಬೇಡಿ, ಪೊಲೀಸರಿಗಿಂತ ನ್ಯಾಯಾಧೀಶರಾಗಿರಲು ಪ್ರಯತ್ನಿಸಿ ನ್ಯಾಯಾ ನೀಡುವುದನ್ನ ಹೊರತು ಪಡಿಸಿ. ತನಿಖೆ ವಿಚಾರಣೆ ಬಿಟ್ಟು ತಾಳ್ಮೆಯಿಂದ ಜನರ ಸಮಸ್ಯೆ ಆಲಿಸಿ ಎಂದರು.

ರಾಮಣ್ಣ ಶ್ರೇಷ್ಠಿ ಪಾರ್ಕ್ ನ ದೇವಸ್ಥಾನದಿಂದ ಮನೆ ಮನೆಗೆ ಪೊಲೀಸ್ ಉದ್ಘಾಟಿಸಿದ್ದಕ್ಕೆ ಮಾಡಿದ್ದಕ್ಕೆ ಹೆಮ್ಮೆಯಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಜಿಕೆ ತಿಳಿಸಿದರು.
ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಮಹಾತ್ಮ ಗಾಂಧಿ, ಬಾಲಗಂಗಾಧರ ನಾಥ್ ತಿಲಕ್ ಬಂದು ಹೋಗ ಜಾಗ ಮತ್ತು ಇದನ್ನ ಬಿಡಿ ಜತ್ತಿ ಉದ್ಘಾಟಿಸಿದ ಐತಿಹಾಸಿಕ ಸ್ಥಳ ಇದಾಗಿದೆ ಹಾಗಾಗಿ ನಮ್ಮ ಕಾರ್ಯಕ್ರಮವನ್ನ ಉದ್ಘಾಟಿಸಲಾಗುತ್ತಿದೆ ಎಂದರು.
ಈಗಲೂ ಪೊಲೀಸರ ಬಗ್ಗೆ ಜನರಲ್ಲಿ ಭಯವಿದೆ. ಬ್ರಿಟಿಶ್ ಲೆಗಸಿಯ ಸೈಕಲಾಜಿಕಲ್ ಫಿಯರ್ ಇವತ್ತಿಗೂ ಇದೆ. ಇಲಾಖೆಯ ಜೊತೆ ಒಡನಾಟ ಇರುವವರಿಗೆ ಪೊಲೀಸರು ಸ್ಪಂಧಿಸಿರುವ ಬಗ್ಗೆ ಒಳ್ಳೆ ಅಭಿಪ್ರಾಯವಿದೆ.
ಸಿನಿಮಾ, ಧಾರವಾಹಿ, ಕಥೆಗಳನ್ನ ಓದಿಕೊಂಡು ಇರುವವರಿಗೆ ಪೊಲೀಸರ ಬಗ್ಗೆ ಋಣಾತ್ಮಕ ನಂಬಿಕೆಯಿದೆ. ಮನೆ ಮಬೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳನ್ನ ನೇಮಿಸಲಾಗಿರುತ್ತದೆ.
ಮೊಹಲ್ಲಾಗೆ ಸಿಬ್ಬಂದಿಯು ಭೇಟಿ ಮಾಡಿ ಸಭೆ ನಡೆಸಲಿದ್ದಾರೆ. ಮೈಕ್ರೋ ಲೆವೆಲ್ ಗೆ ನಾವು ಹೋಗುತ್ತಿದ್ದೇವೆ ಅಕ್ಕಪಕ್ಕ ಜಗಳ, ಹೆಣ್ಣು ಮಕ್ಕಳಿಗೆ ಚುಡಾಯಿಸುವುದು, ಮಾದಕ ವಸ್ತು ಸೇವನೆ, ಬೇರೆ ರೀತಿ ಕಾನೂನು ಅರಿವು ಮೂಡಿಸುವ ಬಗ್ಗೆ ಈ ಸಿಬ್ಬಂದಿ ಪ್ರಯತ್ನಿಸಲಿದ್ದಾರೆ ಎಂದರು.
ಇದರಿಂದ ಜನಸ್ನೇಹಿ ಪೊಲೀಸ್ ಆಗಲಿದೆ. ಘಟನೆಯನ್ನ ತಡೆಯಲು ಈ ಮನೆ ಮನೆಗೆ ಪೊಲೀಸ್ ಕಳೆದ 10-12 ದಿನದಿಂದ ನಡೆಯುತ್ತಿದೆ. ಸಮಸ್ಯೆಗಳನ್ನ ತಿಳಿಸಿ. 100% ಪರಿಹಾರ ನೀಡಲು ಸಾಧ್ಯವಾಗುತ್ತಾ ಎಂಬುದು ಬೇರೆ ಪ್ರಶ್ನೆ ಆದರೆ ನಾಗರೀಕರು ಮತ್ತು ಪೊಲೀಸರ ನಡುವೆ ಒಳ್ಳೆಯ ಸಂಬಂಧ ಬೆಳೆಯುತ್ತದೆ ಎಂದರು.

ಪ್ರಸ್ತಾವಿಕ ಭಾಷಣ ಮಾಡಿದ ಅಡಿಷನಲ್ ಎಸ್ಪಿ ಮನೆ ಮನೆಗೆ ಪೊಲೀಸ್ ವಿನೂತನ ಪ್ರಯೋಗವಾಗಿದೆ. ಇದು ಗೃಹಸಚಿವ ಡಾ.ಪರಮೇಶ್ವರ್ ಅವರ ಕನಸಾಗಿದೆ. ಇದರಲ್ಲಿ ಹೊಸದು ಏನೂ ಇಲ್ಲ ಸಂವಿಧಾನದ ಅನುಗುಣವಾಗಿ ಸೇವೆ ಹಂಚಲಾಗಿದೆ. ಮನೆ ಬಾಗಿಲಿಗೆ ಪೊಲೀಸ್ ವ್ಯವಸ್ಥೆ ಆಗಿದೆ ಎಂದರು.
ನಗರದಲ್ಲಿ ಮೊಹಲ್ಲಾ ಸಭೆ ನಡೆಸಿದರೆ, ಫೀಲ್ಡ್ ವ್ಯವಸ್ಥೆಯನ್ನಹಳ್ಳಿಗಳಲ್ಲಿ ಮಾಡಲಾಗುತ್ತಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಮನೆ ಮನೆಗೆ ಪೊಲೀಸ್ ಹೋಗುತ್ತಿದ್ದಾರೆ. ಮೊದಲು ಪೊಲೀಸರು ಮನೆಗೆ ಹೋದರೆ ಸಾಮಾಜಿಕ ಕಳಂಕವೊಂದಿತ್ತು. ಇವರು ಯಾಕೆ ಮನೆಗೆ ಬಂದಿದ್ದಾರೆ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿತ್ತು.
ಈಗ ಬೀಟ್ ವ್ಯವಸ್ಥೆಯನ್ನ ಹೆಚ್ಚಿಸಲಾಗುತ್ತಿದೆ. ಕ್ಲಸ್ಟರ್ ನಿರ್ಮಿಸಿಕೊಂಡು ಪ್ರತಿ ತಿಂಗಳ ಎರಡನೇ ಶನಿವಾರ ಭೇಟಿ ಮಾಡಲಾಗುತ್ತಿದೆ ಸಭೆ ನಡೆಸಲಾಗುತ್ತಿದೆ ಎಂದರು. ಬೀಟ್ ಸಿಬ್ಬಂದಿ ಸಮಸ್ಯೆ ಬಗೆಹರಿಸಲಾಗುತ್ತಿದೆ. ಹೆಚ್ಚಿನ ಸಹಕಾರ ಬೇಕಿದ್ದರೆ ಠಾಣಾಧಿಕಾರಿಗೆ ಕೊಡುತ್ತಾರೆ ಎಂದರು.

ಪತ್ರ ವ್ಯವಹಾರ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನಿಸಲಾಗುವುದು. ಈ ಮೊದಲು ಫೈಯರ್ ಫೈಟಿಂಗ್ ವ್ಯವಸ್ಥೆಯಿದೆ. ಈಗ ಜನರ ಜೊತೆಗೆ ಸಂಪರ್ಕ ಇಟ್ಟುಕೊಂಡು ಘಟನೆ ನಡೆಯುವ ಮುಂಚೆ ಪೊಲೀಸ್ ಕ್ರಮ ಜರುಗಿಸುವ ಕೆಲಸ ವಾಗಿದೆ ಇದನ್ನ ಪ್ರೋಆಕ್ಟಿವ್ ಪೊಲೀಸ್ ವ್ಯವಸ್ಥೆಯಾಗಿದೆ.