ಶಿವಮೊಗ್ಗದಲ್ಲಿ ದಿನಾಂಕ 23.ಜೂನ್.2025ರಂದು ನಗರದ ಐಬಿ ವೃತ್ತದಲ್ಲಿ ಪಶ್ಚಿಮ ಸಂಚಾರಿ ಠಾಣೆಯ ಪಿಎಸ್ಐ ತಿರುಮಲೇಶ್ ಹಾಗೂ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುವ ವೇಳೆಯಲ್ಲಿ ಆಂಬುಲೆನ್ಸ್ ವಾಹನವೊಂದು ಅಜಗೂರೂಕ ಹಾಗೂ ಅಪಾಯಕಾರಿ ಚಾಲನೆ ಮಾಡುತ್ತ ಬಂದಿದ್ದನ್ನು ಕಂಡು ತಡೆದು ನಿಲ್ಲಿಸಿದ ಪಿಎಸ್ಐ ತಿರುಮಲೇಶ್ ತಂಡ ತಪಾಸಣೆ ನಡೆಸಿದಾಗ ಚಾಲಕ ಮಧ್ಯಪಾನ ಮಾಡಿರುವುದು ಕಂಡುಬಂದಿದ್ದು.
ನಂತರ ವಾಹನ ದಾಖಲಾತಿಗಳನ್ನು ಪರಿಶೀಲನೆ ಮಾಡಿದಾಗ ಇನ್ಶೂರೆನ್ಸ್ ಸಹ ಇಲ್ಲದೆ ಇರುವುದು ಕಂಡುಬಂದಿರುತ್ತದೆ. ಈ ಸಂಬಂಧ ಮಾನ್ಯ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದ್ದು ನ್ಯಾಯಾಲಯವು ಇಂದು 13,000₹ ದಂಡ ವಿಧಿಸಿದ್ದಾರೆ.

ಶಿವಮೊಗ್ಗ ನಗರದಲ್ಲಿ ದಿನ ನಿತ್ಯ ಜನಸಾಮಾನ್ಯರಲ್ಲಿ ಸಂಚಾರಿ ನಿಯಮದ ಅರಿವು ಮೂಡಿಸುವ ಜೊತೆಗೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರಿಗೆ ಸಿಂಹ ಸ್ವಪ್ನವಾಗಿರುವ ಪಶ್ಚಿಮ ಸಂಚಾರಿ ಠಾಣೆಯ ಪಿಎಸ್ಐ ತಿರುಮಲೇಶ್ ಕಾರ್ಯಕ್ಕೆ ನಗರದ ಸಾರ್ವಜನಿಕರಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.