ಶಿವಮೊಗ್ಗ | ದೌರ್ಜನ್ಯ ಪ್ರತಿಬಂಧ ಸಮಿತಿಗೆ ಸದಸ್ಯರ ಆಯ್ಕೆ; ಕೆಲವರ ಬಗ್ಗೆ ಹರಮಘಟ್ಟ ರಂಗಪ್ಪ ಆಕ್ಷೇಪ

Date:

Advertisements

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ, ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಇರುವ ದೌರ್ಜನ್ಯ ಪ್ರತಿಬಂಧ ಸಮಿತಿಗೆ ಶಿವಮೊಗ್ಗ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸದಸ್ಯರ ನೇಮಕಾತಿ ನಡೆದಿದ್ದು, ಐವರನ್ನು ಆಯ್ಕೆ ಮಾಡಲಾಗಿದೆ.

ಇದರ ಸಂಬಂಧ ಡಿಎಸ್‌ಎಸ್ ಹರಮಘಟ್ಟ ರಂಗಪ್ಪನವರ ಬಣದಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಬೆಳಿಗ್ಗೆ 11ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಅಧಿಕಾರೇತರ ನಾಮನಿರ್ದೇಶನ ಸದಸ್ಯರ ನೇಮಕಾತಿ ಪೈಕಿ ಎಸ್‌ಸಿ ಸದಸ್ಯರಾಗಿ ಶಿವಬಸಪ್ಪ, ರುದ್ರಪ್ಪ, ಬೂದಿಗೆರೆ ಬಸವರಾಜ್, ಮಂಜುನಾಥ್ ಅವರು ಆಯ್ಕೆಯಾದರೆ, ಎಸ್‌ಟಿ ವಿಭಾಗದಿಂದ ಅಣ್ಣಪ್ಪನವರನ್ನು ನೇಮಿಸಲಾಗಿದೆ. ಹಿಂದುಳಿದ ವರ್ಗದದಿಂದ ಶಿವಮೊಗ್ಗದ ದಿನೇಶ್, ತೀರ್ಥಹಳ್ಳಿಯಿಂದ ನಾಗರಾಜ್ ಮತ್ತು ಸೊರಬದಿಂದ ಓಂಪ್ರಕಾಶ್ ಸೇರಿದಂತೆ ಮೂವರನ್ನು ನೇಮಿಸಲಾಗಿದೆ.

Advertisements

ಸಮಾಜ ಕಲ್ಯಾಣ ಕಚೇರಿಯಲ್ಲಿ ಅಟ್ರಾಸಿಟಿ ಸಮಿತಿಗೆ ಸದಸ್ಯರ ಆಯ್ಕೆಯ ಪ್ರಕ್ರಿಯೆ ನಡೆದಿದ್ದು, ಕೆಲವರ ಆಯ್ಕೆ ವಿಚಾರದಲ್ಲಿ ಡಿಎಸ್‌ಎಸ್ ಹರಮಘಟ್ಟ ರಂಗಪ್ಪನವರ ಬಣ ಆಕ್ಷೇಪಿಸಿದ್ದು, “ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಆಯ್ಕೆ ವಿಚಾರದಲ್ಲಿ ಕರ್ತವ್ಯ ಲೋಪವೆಸಗಿದ್ದಾರೆ. ಅರ್ಜಿದಾರರ ಪೂರ್ಣ ಪ್ರಮಾಣದಲ್ಲಿ ಪೊಲೀಸ್ ವೆರಿಫಿಕೇಷನ್ ಆಗದೆ ಡಿಸಿಗೆ ತಪ್ಪು ಮಾಹಿತಿ ನೀಡಿ ಸಮಿತಿ ರಚಿಸಲಾಗಿದೆ” ಎಂದು ದೂರಿದರು.

“ಆಯ್ಕೆಯ ವಿಚಾರವಾಗಿ ಡಿಸೆಂಬರ್‌ 02ರಂದೇ ಗುಪ್ತವಾಗಿ ಸಮಾಜ ಕಲ್ಯಾಣ ಇಲಾಖೆಯ ಡಿಡಿ ಮಲ್ಲೇಶಪ್ಪ ಆಯ್ಕೆ ಮಾಡಿ ಇಟ್ಟಿದ್ದಾರೆ. ದಲಿತ ಹೋರಾಟಗಾರರು, ಹಿರಿಯರು, ಸಮಾಜಕ್ಕೆ ಶ್ರಮಿಸಿದವರು ಮತ್ತು ಶೋಷಿತ ವರ್ಗದವರನ್ನು ಈ ಸಮಿತಿಗೆ ಆಯ್ಕೆ ಮಾಡಬೇಕು. ಕೆಲವರ ಆಯ್ಕೆ ಸೂಕ್ತವಾಗಿದ್ದರೂ ಇನ್ನು ಕೆಲವರ ಆಯ್ಕೆಯ ವಿಚಾರದಲ್ಲಿ ಡಿಡಿಯವರು ರಾಜಕೀಯ ಆಮಿಷಕ್ಕೆ ಬಲಿಯಾಗಿರುವುದಾಗಿ ಕಂಡುಬರುತ್ತಿದೆ. ಹಾಗಾಗಿ ಸಮಿತಿಯನ್ನು ಮತ್ತೊಮ್ಮೆ ಪುನರ್ ಪರಿಶೀಲಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಿಜೆಪಿ ಪ್ರವಾಸ ಪೋಸ್ಟರ್‌ನಲ್ಲಿ ವಿಜಯೇಂದ್ರ ಫೋಟೋ ನಾಪತ್ತೆ; ಗೊತ್ತೇ ಇಲ್ಲವೆಂದ ಮಾಜಿ ಸಚಿವ

“ಶಿವಮೊಗ್ಗ ಜಿಲ್ಲಾ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ನಿವೃತ್ತ ನೌಕರರ ಸಂಘ, ಆದಿ ಜಾಂಬವ ಸಂಘ, ಲಂಬಾಣಿ ಹಾಗೂ ಹೊಲೆಯ ಮಾದಿಗ ಹೀಗೆ ಎಲ್ಲರನ್ನೂ ಒಳಗೊಂಡು ಸಮಿತಿ ರಚಿಸಬೇಕು. ಈಗ ಆಗಿರುವ ಸಮಿತಿಯಿಂ ಉಳಿದವರಿಗೆ ಅನ್ಯಾಯ ಎಸಗಿದಂತಾಗಿದೆ ಎಂಬ ಕೂಗು ಕೇಳಿಬರುತ್ತಿದೆ” ಎಂದರು.

“ಕರ್ತವ್ಯ ಲೋಪವೆಸಗಿರುವ ಉಪನಿರ್ದೇಶಕರು ಸಮಿತಿ ಆಯ್ಕೆಯನ್ನು ಪುನರ್ ಪರಿಶೀಲನೆ ಮಾಡದಿದ್ದರೆ ಡಿಡಿಯ ವಿರುದ್ಧ ಡಿಎಸ್ಎಸ್ ಹೋರಾಡಲಿದೆ” ಎಂದು ಡಿಎಸ್‌ಎಸ್ ಹರಮಘಟ್ಟ ರಂಗಪ್ಪನವರ ಬಣ ಎಚ್ಚರಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X